ಹೈನುಗಾರಿಕೆಗೆ ಸಹಾಯಧನ: ಅರ್ಜಿ ಆಹ್ವಾನ

 

ಹೊಸಪೇಟೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಉಳಿಕೆ ಅನುದಾನದಲ್ಲಿ ವಿಶೇಷ ಘಟಕ ಯೋಜನೆ ಮತ್ತು  ಗಿರಿಜನ ಉಪ ಯೋಜನೆ ಅನುಷ್ಠಾನಗೊಳಿಸಲು ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಒಂದು ಮಿಶ್ರತಳಿ ಹಸು/ ಸುಧಾರಿತ ಎಮ್ಮೆ ಘಟಕಕ್ಕೆ ಒಟ್ಟು ಮೊತ್ತ ರೂ. 65,000, ಇದರಲ್ಲಿ ಶೇ.90ರಷ್ಟು ಅಂದರೆ ರೂ. 58,500 ಸಹಾಯಧನ ಮತ್ತು ಉಳಿಕೆ ಮೊತ್ತ ರೂ. 6,500 ಫಲಾನುಭವಿಯ ವಂತಿಕೆ ಅಥವಾ ಬ್ಯಾಂಕ್ ಸಾಲವಾಗಿದೆ. ಯೋಜನೆಯಡಿ ವಿಜಯನಗರ ಹಾಗೂ ಹಗರಿಬೊಮ್ಮನಹಳ್ಳಿ ವಿಧಾನಸಭಾಕ್ಷೇತ್ರಕ್ಕೆ ತಲಾ 02 ರಂತೆ ಪರಿಶಿಷ್ಟ ಜಾತಿಯವರಿಗೆ ಒಟ್ಟು 4 ಗುರಿ ನಿಗದಿಪಡಿಸಲಾಗಿದೆ. ಪರಿಶಿಷ್ಟ ಪಂಗಡದವರಿಗೆ ವಿಜಯನಗರಕ್ಕೆ 3 ಹಾಗೂ ಹಗರಿಬೊಮ್ಮನಹಳ್ಳಿಗೆ 2 ಸೇರಿ ಒಟ್ಟು 5 ಗುರಿ ನಿಗದಿಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ.33ರಷ್ಟು, ವಿಶೇಷ ಚೇತನರಿಗೆ ಶೇ.3ರ ಆದ್ಯತೆ ನೀಡಲಾಗುವುದು.

Advertisement

ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಪಶು ಆಸ್ಪತ್ರೆ, ಹೊಸಪೇಟೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement