ಹೊಟೇಲ್ ವೇಟರ್ ಆದ ಉರ್ಫಿ ಜಾವೇದ್.!

ಮುಂಬೈ: ವಿಶಿಷ್ಟ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾದ ನಟಿ ಉರ್ಫಿ ಜಾವೇದ್ ಅವರು ಮುಂಬೈನ ಜನಪ್ರಿಯ ರೆಸ್ಟೋರೆಂಟ್ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವೃತ್ತಿಯಲ್ಲಿನ ಈ ಹಠಾತ್ ಬದಲಾವಣೆಯು ಆಕೆಯ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿ ಮಾಡಿದೆ.

ಉರ್ಫಿ ಜಾವೇದ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ, ಪೋಸ್ಟ್ನಲ್ಲಿ ಆಕೆ ವೇಟರ್ ಆಗಿ ತನ್ನ ಕನಸನ್ನು ನನಸಾಗಿಸುವ ಬಗ್ಗೆ ಹಂಚಿಕೊಂಡಿದ್ದು, ಯಾವುದೇ ಕೆಲಸವು ದೊಡ್ಡದು ಅಥವಾ ಚಿಕ್ಕದಲ್ಲ ಎಂದು ಉಲ್ಲೇಖಿಸಿದ್ದಾರೆ. ಕ್ಯಾನ್ಸರ್ ರೋಗಿಗಳ ಸಹಾಯಕ್ಕಾಗಿ ಅವರು ಈ ರೀತಿಯ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ತನ್ನ ಕೆಲಸದಿಂದ ಬರುವ ಗಳಿಕೆಯನ್ನು ಕ್ಯಾನ್ಸರ್ ರೋಗಿಗಳ ಸಹಾಯ ಸಂಘಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಒಳ್ಳೆಯ ಕೆಲಸಕ್ಕೆ ಈ ಕಾರ್ಯ ಮಾಡಿದ್ದೇನೆ ಎಂದು ಉರ್ಫಿ ಜಾವೇದ್ ಸಂತೋಷ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಆಕೆಯ ಈ ವೈರಲ್ ವೀಡಿಯೊಗೆ ಮೆಚ್ಚುಗೆ ವ್ಯಕ್ತ ಪಡೆಸಿದ್ದು, ಉರ್ಫಿ ಜಾವೇದ್ ಒಂದು ಒಳ್ಳೆಯ ಕೆಲಸಕ್ಕೆ ಇಂತಹ ಕಾರ್ಯ ಮಾಡಿರುವುದು ಬಹಳ ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ. ತನ್ನ ಗಮನ ಸೆಳೆಯುವ ಬಟ್ಟೆಗಳಿಗೆ ಹೆಸರುವಾಸಿಯಾಗಿರುವ ಉರ್ಫಿ ಬಹಳಷ್ಟು ಸೀರಿಯಲ್ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement