ಇಂಗು ಮಕ್ಕಳಲ್ಲಿ ಕಾಡುವ ಹೊಟ್ಟೆ ಹುಳುವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬಿಸಿನೀರಿಗೆ ಇಂಗು ಹಾಕಿ ಮಕ್ಕಳಿಗೆ ಕುಡಿಯಲು ಕೊಡಿ. ಅಲ್ಲದೇ, ಆಹಾರಗಳಲ್ಲಿ ಸಹ ಇಂಗನ್ನು ಮಿಕ್ಸ್ ಮಾಡಿ ಕೊಡಿ.
ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಹಾಕಿ ಮಿಶ್ರಣ ಮಾಡಿ ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಹಾಕಿ ಕದಡಿ.
ಬೆಳಗಿನ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನವೂ ಒಂದು ವಾರದ ತನಕ ಈ ಮಿಶ್ರಣವನ್ನು ಕುಡಿಯುವುದರಿಂದ ಜಂತು ಹುಳುಗಳ ಸಮಸ್ಯೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಅಷ್ಟೇ ತ್ವರಿತ ಗತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಒಂದು ಗ್ಲಾಸ್ ಮಜ್ಜಿಗೆಗೆ 1 ಟೇಬಲ್ ಚಮಚ ಅರಿಶಿನ ಹಾಕಿ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತವೆ. 3 -4 ತುಳಸಿ ಎಲೆಯ ರಸವನ್ನು ತೆಗೆದುಕೊಂಡು ಅದರ ರಸವನ್ನು ತಯಾರಿಸಿಕೊಳ್ಳಿ.
ಅದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು 1 ಚಿಟಿಕೆ ಒಣ ಶುಂಠಿ ಪುಡಿಯನ್ನು ಮಿಕ್ಸ್ ಮಾಡಿ ತಿನ್ನಿಸಿ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ಸೇವನೆ ಮಾಡುವುದರಿಂದ ಜಂತು ಹುಳುಗಳ ಸಮಸ್ಯೆಯಿಂದ ಅತ್ಯಂತ ಬೇಗನೆ ಮುಕ್ತಿ ಪಡೆಯಬಹುದು.
ರಾತ್ರಿ ಮಲಗುವ ಸಮಯದಲ್ಲಿ ಊಟ ಮಾಡಿದ ನಂತರ 2 – 3 ಲವಂಗಗಳನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಿ ಆರಿದ ಮೇಲೆ ಸೇವನೆ ಮಾಡುವುದರಿಂದ ಜಂತು ಹುಳುಗಳು ನಾಶವಾಗಿ ಬೆಳಗ್ಗೆ ಮಲ ವಿಸರ್ಜನೆ ಸಂದರ್ಭದಲ್ಲಿ ಹೊರಬರುತ್ತವೆ ಎಂದು ಹೇಳಲಾಗಿದೆ.(ವೈದ್ಯರ ಸಲಹೆ ಪಡೆದುಕೊಳ್ಳಿ)
 
				 
         
         
         
															 
                     
                     
                     
                     
                    


































 
    
    
        