ಹೊಳೆಯುವ ತ್ವಚೆಗಾಗಿ ಈ ಅಕ್ಕಿಹಿಟ್ಟಿನ ಫೇಸ್‌ಪ್ಯಾಕ್‌ಗಳನ್ನು ಒಮ್ಮೆ ಪ್ರಯತ್ನಿಸಿ

ಅಕ್ಕಿ ಹಿಟ್ಟನ್ನು ನಾವು ದಿನ ನಿತ್ಯ ತಿಂಡಿಗೆ ಬಳಸುತ್ತೇವೆ. ಉದಾಹರಣೆಗೆ ದೋಸೆ, ಇಡ್ಲಿ ಹಾಗೂ ಇನ್ನೇನೋ ಅಕ್ಕಿ ಹಿಟ್ಟಿನ ತಿನಿಸುಗಳನ್ನು ತಯಾರಿಸುತ್ತೇವೆ. ಅಕ್ಕಿ ಹಿಟ್ಟನ್ನು ತಿನಿಸುಗಳನ್ನು ತಯಾರಿಸುವುದನ್ನು ಹೊರತು ಪಡಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲೂ ಬಳಸಬಹುದು ಎನ್ನುವುದು ನಿಮಗೆ ಗೊತ್ತಾ? ನಾವು ನಮ್ಮ ಮುಖ ಅಂದವನ್ನು ಹೆಚ್ಚಿಸಲು ಯಾವೆಲ್ಲಾ ರೀತಿಯ ದುಬಾರಿ ಕ್ರೀಮ್‌ಗಳನ್ನು ಫೇಸ್‌ಪ್ಯಾಕ್‌ಗಳನ್ನು ಬಳಸುತ್ತೇವೆ. ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಇನ್ನೂ ಕೆಲವರು ಹಲವಾರು ಮನೆಮದ್ದುಗಳನ್ನು ಟ್ರೈ ಮಾಡುತ್ತಾರೆ. ನೀವೂ ಇವೆಲ್ಲವನ್ನೂ ಬಳಸಿ ಬೇಸತ್ತಿದ್ದರೆ ನಿಮಗಾಗಿ ಸಿಂಪಲ್‌ ಫೇಸ್‌ಪ್ಯಾಕ್‌ನ್ನು ತಿಳಿಸಿಕೊಡಲಿದ್ದೇವೆ. ಅಕ್ಕಿ ಹಿಟ್ಟಿನ ಫೇಸ್‌ಪ್ಯಾಕ್‌, ಇದಕ್ಕೆ ನೀವು ಹಣ ಖರ್ಚು ಮಾಡಬೇಕೆಂದೇ ಇಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಅಕ್ಕಿ ಹಿಟ್ಟು ಇದ್ದೇ ಇರುತ್ತದೆ. ಅಕ್ಕಿ ಹಿಟ್ಟನ್ನು ಮುಖಕ್ಕೆ ಬಳಸುವುದರಿಂದ ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಮುಖದಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಕ್ಕಿ ಹಿಟ್ಟನ್ನು ಯಾವ ರೀತಿ ಬಳಸಬೇಕು, ಇದರ ಪ್ರಯೋಜನಗಳೇನು ಎನ್ನುವುದನ್ನು ನಾವಿಲ್ಲಿ ತಿಳಿಯೋಣ. ಈ ಅಕ್ಕಿ ಹಿಟ್ಟಿನ ಫೇಸ್‌ಪ್ಯಾಕ್‌ ಪಿಗ್ಮೆಂಟೇಶನ್ ಮತ್ತು ಶುಷ್ಕ ಚರ್ಮಕ್ಕೆ ಅತ್ಯಂತ ಪರಿಣಾಮಕಾರಿ ಮನೆಮದ್ದಾಗಿದೆ ಏಕೆಂದರೆ ಇದು ನೈಸರ್ಗಿಕವಾಗಿ ಪೋಷಿಸುವ ಘಟಕಗಳ ಅತ್ಯುತ್ತಮ ಮಿಶ್ರಣವಾಗಿದೆ. ಅಕ್ಕಿ ಹಿಟ್ಟಿನ ಜೊತೆ ಅರಿಶಿನ ಮಿಕ್ಸ್‌ ಮಾಡಿ ಫೇಸ್‌ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಒಣ ಚರ್ಮದವರು ಅಕ್ಕಿ ಹಿಟ್ಟಿನ ಜೊತೆಗೆ ಅಲೋವೆರಾ ಜೆಲ್, ಸೌತೆಕಾಯಿ ಮಿಕ್ಸ್‌ ಮಾಡಿ ಫೇಸ್‌ಪ್ಯಾಕ್ ತಯಾರಿಸಿ. ಅಕ್ಕಿ ಹಿಟ್ಟು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ, ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ, ಒರಟುತನವನ್ನು ಕಡಿಮೆ ಮಾಡುತ್ತದೆ ಮತ್ತು ನಿಯಮಿತವಾಗಿ ಮುಖ ಮತ್ತು ಚರ್ಮಕ್ಕೆ ಹಚ್ಚಿದಾಗ ಚರ್ಮವನ್ನು ಕೋಮಲಗೊಳಿಸುತ್ತದೆ. ಉತ್ತಮ ಫಲಿತಾಂಶಗಳಿಗಾಗಿ, ಕನಿಷ್ಠ ವಾರಕ್ಕೊಮ್ಮೆ ಈ ಫೇಸ್‌ಪ್ಯಾಕ್‌ನ್ನು ಹಚ್ಚಬೇಕು. ಕೆಲವರ ಕಣ್ಣಿನ ಕೆಳಭಾಗದಲ್ಲಿ ಕಪ್ಪನೆಯ ಕಲೆ ಇರುತ್ತದೆ. ಇದನ್ನು ಡಾರ್ಕ್‌ ಸರ್ಕಲ್ ಎನ್ನುತ್ತಾರೆ. ಡಾರ್ಕ್‌ ಸರ್ಕಲ್‌ ಸಮಸ್ಯೆ ಇದ್ದವರು ಅಕ್ಕಿ ಹಿಟ್ಟಿನ ಜೊತೆ ಕಡಲೆ ಹಿಟ್ಟನ್ನು ಸೇರಿಸಿ ಫೇಸ್‌ಪ್ಯಾಕ್ ಹಚ್ಚುವುದರಿಂದ ಡಾರ್ಕ್‌ ಸರ್ಕಲ್‌ನ್ನು ಕಡಿಮೆ ಮಾಡಬಹುದು. ಅದ್ಭುತವಾದ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಕಪ್ಪು ಚಹಾದ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ, ಇದು ಹಾನಿಕಾರಕ ಟಾಕ್ಸಿನ್‌ಗಳು, ಕಪ್ಪು ಕಲೆಗಳು, ಮೊಡವೆಗಳು ಮತ್ತು ಚರ್ಮದಿಂದ ಕಲೆಗಳನ್ನು ಉಂಟುಮಾಡುವ ಏಜೆಂಟ್‌ಗಳನ್ನು ಹೊರಹಾಕುತ್ತದೆ. ಕೆಲವರು ಹೆಚ್ಚು ಬಿಸಿಲಿಗೆ ಓಡಾಡುವುದರಿಂದ ಮುಖದಲ್ಲಿ ಸನ್‌ಟ್ಯಾನ್‌ ಆಗುತ್ತದೆ. ಇದರಿಂದ ಅವರು ಕಪ್ಪಗೆ ಕಾಣುತ್ತಾರೆ. ಅಕ್ಕಿ ಹಿಟ್ಟಿನ ಫೇಸ್‌ಪ್ಯಾಕ್ ಬಳಸುವುದರಿಂದ ಅವರ ಚರ್ಮ ಹೊಳಪನ್ನು ಪಡೆಯುವುದರ ಜೊತೆಗೆ ಬೆಳ್ಳಗಾಗುತ್ತದೆ. ಮುಖದಲ್ಲಿನ ಮೊಡವೆಗಳು ಮತ್ತು ಮೊಡವೆಗಳನ್ನು ಉಂಟುಮಾಡುವ ಚರ್ಮದ ಮೇಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮದ ಟೋನ್ ಅನ್ನು ಹೆಚ್ಚಿಸುತ್ತದೆ. ನೀವು ಅಕ್ಕಿ ರುಬ್ಬಿ ಹಿಟ್ಟನ್ನು ತೆಗೆದುಕೊಳ್ಳಬಹುದು, ಇಲ್ಲವಾದರೆ ಅಕ್ಕಿ ಹಿಟ್ಟಿನ ಪುಡಿಯನ್ನೂ ತೆಗೆದುಕೊಳ್ಳಬಹುದು. ಅಕ್ಕಹಿಟ್ಟಿನ ಜೊತೆಗೆ , ಗುಲಾಬಿ ಜಲ ಹಾಗೂ ಜೇನುತುಪ್ಪವನ್ನೂ ಮಿಕ್ಸ್ ಮಾಡಬಹುದು. ಸೇರಿಸಿ ನೀರಿನೊಂದಿಗೆ ಪೇಸ್ಟ್‌ ರೀತಿ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಇಪ್ಪತ್ತು ನಿಮಿಷಗಳ ವರೆಗೆ ಹಾಗೆಯೇ ಬಿಡಿ. ಅಕ್ಕಿ ಹಿಟ್ಟು ಸರಿಯಾಗಿ ಒಣಗಿದ ನಂತರ ಮುಖ ತೊಳೆಯಿರಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement