ಕೇಂದ್ರ ಸರಕಾರದ ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆಯಡಿ ಹೊಸದಾಗಿ ಮದುವೆಯಾಗುವವರಿಗೆ 2.50 ಲಕ್ಷ ರೂ.ಪ್ರೋತ್ಸಾಹ ಧನ ನೀಡಲಾಗುತ್ತದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸಿ ದಲಿತರನ್ನು ಒಳಗೊಂಡ ಜೋಡಿಗಳ ಅಂತರ್ಜಾತಿ ವಿವಾಹಕ್ಕೆ ಈ ಯೋಜನೆಯಡಿ ಪ್ರೋತ್ಸಾಹ ಧನವನ್ನು ಡಾ.ಅಂಬೇಡ್ಕರ್ ಫೌಂಡೇಶನ್ ವತಿಯಿಂದ ನೀಡಲಾಗುತ್ತದೆ. ಕಾನೂನುಬದ್ಧ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ ಪ್ರತಿ ಮದುವೆಗೆ ರೂ.2.50 ಲಕ್ಷ. ನಾನ್ ಜುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ಪ್ರಿ-ಸ್ಟ್ಯಾಂಪ್ಡ್ ರಸೀದಿಯನ್ನು ಪಡೆದ ಮೇಲೆ ರೂ. 1.50 ಲಕ್ಷವನ್ನು ಅರ್ಹ ದಂಪತಿಗಳಿಗೆ RTGS/NEFT ಮೂಲಕ ದಂಪತಿಗಳ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ತದನಂತರ ಉಳಿದ ಮೊತ್ತವನ್ನು 3 ವರ್ಷಗಳ ಅವಧಿಗೆ ಫೌಂಡೇಶನ್‌ನಲ್ಲಿ ಸ್ಥಿರ ಠೇವಣಿಯಲ್ಲಿ ಇರಿಸಲಾಗುತ್ತದೆ. ಈ ಮೊತ್ತವನ್ನು ಫೌಂಡೇಶನ್‌ನಿಂದ 3 ವರ್ಷಗಳ ಪ್ರೋತ್ಸಾಹಧನ ಮಂಜೂರಾದ ಮೇಲೆ ಅದರ ಮೇಲೆ ಬರುವ ಬಡ್ಡಿಯೊಂದಿಗೆ ದಂಪತಿಗಳಿಗೆ 3 ವರ್ಷದ ನಂತರ ವರ್ಗಾವಣೆ ಮಾಡಲಾಗುತ್ತದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಹತಾ ಮಾನದಂಡಗಳೇನು?
ಈ ಯೋಜನೆಯಡಿ ಪ್ರಯೋಜನ ಪಡೆಯಲು ಅಂತರ್-ಜಾತಿ ವಿವಾಹವಾಗಿರಬೇಕು ಅಂದರೆ ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು ಅಥವಾ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
ಮದುವೆಯು ಕಾನೂನಿನ ಪ್ರಕಾರ ಮಾನ್ಯವಾಗಿರಬೇಕು ಮತ್ತು ಹಿಂದೂ ವಿವಾಹ ಕಾಯಿದೆ, 1955 ರ ಅಡಿಯಲ್ಲಿ ಕ್ರಮಬದ್ಧವಾಗಿ ನೋಂದಣಿ ಅಗಿರಬೇಕಾಗುತ್ತದೆ.
ಎರಡನೇ ಮದುವೆಯಾದವರಿಗೆ ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಅರ್ಹರಿರುವುದಿಲ್ಲ.
ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
ಮದುವೆಯಾಗುವ ಜೋಡಿಯಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ದಂಪತಿಗಳ ವಾರ್ಷಿಕ ಆದಾಯವು 5 ಲಕ್ಷ ರೂ.ಕ್ಕಿಂತಲೂ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
1) ಅರ್ಜಿ ನಮೂನೆ/application form.
2) ಜಾತಿ ಮತ್ತು ಆದಾಯ ಪ್ರಮಾಣಪತ್ರ/caste and income certificate.
3) ಹಿಂದೂ ವಿವಾಹ ಕಾಯಿದೆ 1955 ರ ಅಡಿಯಲ್ಲಿ ಮದುವೆಯ/Marriage certificate ಪ್ರಮಾಣಪತ್ರ.
4) ಹಿಂದೂ ವಿವಾಹ ಕಾಯ್ದೆ 1955 ರ ಹೊರತಾಗಿ ಧರ್ಮದ ಪ್ರಮಾಣಪತ್ರ.
5) ಸಂಸದ/ಶಾಸಕರಿಂದ ಶಿಫಾರಸು ಪ್ರಮಾಣ ಪತ್ರ.
6) ಅರ್ಜಿದಾರರ ಅಧಾರ್ ಕಾರ್ಡ/Aadhar card ಪ್ರತಿ.
7) ಬ್ಯಾಂಕ್ ಪಾಸ್ ಬುಕ್/Bank pass book ಪ್ರತಿ.
8) ಪೋಟೋ
-ಎಲ್ಲಿ ಅರ್ಜಿ ಸಲ್ಲಿಸಬೇಕು?
ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಕೊಂಡು ಅರ್ಹ ಅರ್ಜಿದಾರರು ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಂಡು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.