ಬೆಂಗಳೂರು: ಚುನಾವಣಾ ವೆಚ್ಚಕ್ಕಾಗಿ ಬಾಗಮನೆ ಡೆವಲಪರ್ಸ್‌ನಿಂದ ಸಚಿವ ಎಂ.ಬಿ ಪಾಟೀಲ್ ₹4 ಕೋಟಿ ಪಡೆದಿರುವುದು ಅವರ ಚುನಾವಣಾ ಅಫಿಡವಿಟ್‌ನಲ್ಲಿಯೇ ಬಹಿರಂಗವಾಗಿದೆ. ಈಗ ಇದರ ಋಣ ತೀರಿಸಲು ಬಾಗಮನೆ ಡೆವಲಪರ್ಸ್‌ನ ಇನ್ನೊಂದು ಪಾಲುದಾರ ಕಂಪನಿ ವೈಗೈ ಇನ್ವೆಸ್ಟ್‌ಮೆಂಟ್ ಪ್ರೈ.ಲಿಮಿಟೆಡ್ಗೆ ಅಂದಾಜು ₹160 ಕೋಟಿ ಬೆಲೆಬಾಳುವ 8 ಎಕರೆ ಭೂಮಿ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿರುವ ರಾಜ್ಯ ಬಿಜೆಪಿ, ಸಚಿವ ಎಂ.ಬಿ ಪಾಟೀಲ್‌ಗೆ ಪ್ರಶ್ನೆ ಮಾಡಿದೆ. ಬೆಂಗಳೂರಿನ ಡಿಫೆನ್ಸ್ ಎಸ್.ಇ.ಝಡ್ ಪಾರ್ಕ್ನಲ್ಲಿ ಈ ಬೆಲೆ ಬಾಳುವ 8 ಎಕರೆ ಭೂಮಿ ಇದೆ. ಈ ಭೂಮಿಯನ್ನು ನಿಯಮಬಾಹಿರವಾಗಿ ವೈಗೈ ಇನ್ವೆಸ್ಟ್‌ಮೆಂಟ್ ಪ್ರೈ.ಲಿ ಗೆ ನೀಡಲಾಗಿದೆ. ಹೀಗಾಗಿ ವೈಗೈ ಇನ್ವೆಸ್ಟ್‌ಮೆಂಟ್ ಪ್ರೈ.ಲಿಗೆ ಭೂಮಿ ನೀಡಿದ್ದು ತಮ್ಮ ಸಾಲದ ಋಣಬಾಬತ್ತನ್ನು ತೀರಿಸಲೋ ಅಥವಾ ಅದರಲ್ಲಿಯೂ ವಸೂಲಿಬಾಜಿ ನಡೆದಿದೆಯೋ ಎಂಬುದನ್ನು ಟಕಾಟಕ್ ಎಂದು ಭೂಮಿ ಮಂಜೂರು ಮಾಡಿರುವ ಎಂ.ಬಿ.ಪಾಟೀಲರೇ ತಿಳಿಸಬೇಕು ಎಂದು ವೈಗೈ ಇನ್ವೆಸ್ಟ್‌ಮೆಂಟ್ ಪ್ರೈ.ಲಿಗೆ ಭೂಮಿ ನೀಡಿದ್ದು ತಮ್ಮ ಸಾಲದ ಋಣಬಾಬತ್ತನ್ನು ತೀರಿಸಲೋ ಅಥವಾ ಅದರಲ್ಲಿಯೂ ವಸೂಲಿಬಾಜಿ ನಡೆದಿದೆಯೋ ಎಂಬುದನ್ನು ಟಕಾಟಕ್ ಎಂದು ಭೂಮಿ ಮಂಜೂರು ಮಾಡಿರುವ ಎಂ.ಬಿ.ಪಾಟೀಲರೇ ತಿಳಿಸಬೇಕು ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.