ದೆಹಲಿ: 1979ರಲ್ಲಿ ಕೇಂದ್ರ ಕಾನೂನು ಸಚಿವಾಲಯ ನೀಡಿದ ಮಾರ್ಗಸೂಚಿಗಳ ಪ್ರಕಾರ, ಲೋಕಸಭೆ ಚುನಾವಣೆಯ ವೆಚ್ಚವನ್ನು ಕೇಂದ್ರವೇ ಭರಿಸುತ್ತವೆ.
ವಿಧಾನಸಭೆಗಳ ಚುನಾವಣೆಗೆ ಸಂಬಂಧಿಸಿದಂತೆ ಅದಕ್ಕೆ ಆಗುವ ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳೇ ನೀಡಲಿವೆ. ಒಂದು ವೇಳೆ ಇವೆರಡೂ ಏಕಕಾಲದಲ್ಲಿ ನಡೆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರ್ಧದಷ್ಟು ವೆಚ್ಚವನ್ನು ಭರಿಸಬೇಕಾಗುತ್ತದೆ. ಪುರಸಭೆಗಳು, ಪಂಚಾಯತ್‌ಗಳು ಇತರ ಸ್ಥಳೀಯ ಸಂಸ್ಥೆಗಳು ಚುನಾವಣಾ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು.
ಹಾಗೇ ಒಂದು ಮತಗಟ್ಟೆಗೆ ಇಷ್ಟು ಖರ್ಚಾಗುತ್ತೆ ಅಂದ್ರೆ ಯಾವುದೇ ಒಂದು ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (EVM) ಅಳವಡಿಸಲು ₹33,935 ವೆಚ್ಚವಾಗಲಿದೆ. ಪ್ರತಿ ಮತಗಟ್ಟೆಯಲ್ಲಿ ಸರಾಸರಿ 900 ಮತದಾರರು ಇರುತ್ತಾರೆ. ಅಲ್ಲದೆ, ಒಂದು ಮತಗಟ್ಟೆಯಲ್ಲಿ EVM, ಕಂಟ್ರೋಲ್ ಯೂನಿಟ್ ಹಾಗೂ ವಿವಿಪ್ಯಾಟ್ ಅಳವಡಿಸಬೇಕು. ಪ್ರತಿ EVMಗೆ ₹7,991 ವೆಚ್ಚ ತಗುಲುತ್ತದೆ. ಪ್ರತಿ ಮತಗಟ್ಟೆಯ ನಿಯಂತ್ರಣ ಘಟಕದ ಬೆಲೆ ₹9,812, ಪ್ರತಿ ವಿವಿಪಿಎಟಿ ಘಟಕಕ್ಕೆ ₹16,132 ರಷ್ಟು ವೆಚ್ಚ ಆಗಲಿದ್ದು, ಒಟ್ಟು ₹34 ಸಾವಿರ ವರೆಗೆ ಖರ್ಚಾಗುತ್ತದೆ.!