ಉತ್ತರ ಪ್ರದೇಶದ ಲಕ್ನೋದಲ್ಲಿ 1.5 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಅನ್ನು ಗ್ರಾಹಕರಿಗೆ ತಲುಪಿಸಲು ಹೋಗಿದ್ದ 30 ವರ್ಷದ ಡೆಲಿವರಿ ಏಜೆಂಟ್ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ
ತಿಳಿಸಿದ್ದಾರೆ.
ಭರತ್ ಸಾಹು (30) ಸೆಪ್ಟೆಂಬರ್ 23 ರಂದು ಫ್ಲಿಪ್ಕಾರ್ಟ್ನಿಂದ ಆರ್ಡರ್ ಮಾಡಿದ್ದ ಐಫೋನ್ ಅನ್ನು ಗಜಾನನ್ ಎಂಬವರಿಗೆ ತಲುಪಿಸಲು ಹೋಗಿದ್ದರು. ಇದೇ ವೇಳೆ ಗಜಾನನ ಮತ್ತು ಆತನ ಸಹಚರರು ಡೆಲಿವರಿ ಏಜೆಂಟ್ ಸಾಹುವಿನ ಕತ್ತು ಹಿಸುಕಿ ಕೊಲೆಗೈದು ನಂತರ ಆತನ ಶವವನ್ನು ಗೋಣಿಚೀಲದಲ್ಲಿ ಹಾಕಿ ಇಂದಿರಾ ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.