ಇಡೀ ಕನ್ನಡ ನಾಡಿನ ಜನತೆಯನ್ನು ಕಾಮಿಡಿ ಮೂಲಕ ನಕ್ಕು ನಲಸಿದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ನೆನ್ನೆ ತಾನೇ ಹೃದಯಘಾತದಿಂದ ನಮ್ಮೆಲ್ಲರನ್ನು ಅಗಲಿದ್ದಾರೆ. ಈ ವೇಳೆ ಕಾಮಿಡಿ ಕಿಲಾಡಿ ಕುಟುಂಬ ಹಾಗೂ ನಾಡಿನ ಹಿರಿಯ ಕಲಾವಿದರು ಸಂತಾಪಸೂಚಿಸಿದ್ದಾರೆ. ಇದೀಗ ರಾಕೇಶ್ ಪೂಜಾರಿ ಕುಟುಂಬಕ್ಕೆ ಕಾಂತಾರ ಚಿತ್ರತಂಡವು ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯ ಕೇಳಿ ಬಂದಿದೆ.
ನಟ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸುತ್ತಿರುವ ಕಾಂತಾರ-1 ಸಿನಿಮಾದಲ್ಲಿ ರಾಕೇಶ್ ಪೂಜಾರಿ ಕೂಡ ಅಭಿನಯಿಸಿದ್ದರು. ಇಂತಹ ಸಮಯದಲ್ಲೇ ಕಾಂತಾರ ನಟ ರಾಕೇಶ್ ಪೂಜಾರಿ ಸಾವು ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಈ ಸಮಯದಲ್ಲಿ ಸಮಯದಲ್ಲಿ ಕಾಂತಾರ ಸಿನಿಮಾ ತಂಡದಿಂದ 1 ಕೋಟಿ ರೂ. ಪರಿಹಾರವನ್ನು ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ.
ರಾಕೇಶ್ ಪೂಜಾರಿ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.