ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ನಾನ್ ಟೆಕ್ನಿಕಲ್, ಹವಾಲ್ದಾರ್ ಸೇರಿ ಒಟ್ಟು 8326 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
10ನೇ ತರಗತಿ ತೇರ್ಗಡೆಯಾಗಿರುವ ಮತ್ತು 18-25 ವರ್ಷದೊಳಗಿನವರು ಈ ಹುದ್ದೆಗಳಿಗೆ ಅರ್ಹರು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ
ದಿನ ಜುಲೈ 31. https://ssc.gov.in/ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.