ಮಂಡ್ಯ : ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ರಿಂದ ಒಂದು ಲಕ್ಷ ರೂ ಲಂಚ ಸ್ವೀಕರಿಸುವ ವೇಳೆ ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಹಾಗೂಉಪಾಧ್ಯಕ್ಷಲೋಕಾಯುಕ್ತ ಬಲೆ ಬಿದ್ದಿರುವ ಘಟನೆ ಇಂದು ನಡೆದಿದೆ. ಅಧ್ಯಕ್ಷೆಯ ಪತಿ ಶಂಕರ್ ಹಾಗೂ ಉಪಾಧ್ಯಕ್ಷ ಮನೋಹರ್ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆಬಿದ್ದವರಾಗಿದ್ದಾರೆ. ಎಸ್ ಪಿ ಶಂಕರ್ ಎಂಬುವರು ಶೆಟ್ಟಹಳ್ಳಿ ಗ್ರಾಮದ ಶಾಲಾ ಜಾಗವನ್ನು ಒತ್ತುವರಿ ಮಾಡಿ ಕೊಂಡು ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ವಿವಾದಕ್ಕೆಸಂಬಂಧಿ ಸಿದಂತೆ ಈ ವಿವಾದ ಬಗೆಹರಿಸಿ ಕೊಡಲು 10 ಲಕ್ಷ ರೂ ಗಳಿಗೆ ಇವರು ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಎಂ ಪಿ ಶಂಕರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಇಂದು ಕಾರ್ಯಾ ಚರಣೆಗೆ ಇಳಿದ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದ ಡಿವೈಎಸ್ಪಿ ಸುನಿಲ್ ಕುಮಾರ್, ಇನ್ಸ್ ಪೆಕ್ಟರ್ ಬ್ಯಾಟರೇಗೌಡ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಮಾರೇಹಳ್ಳಿ ದೇವಸ್ಥಾನದ ಬಳಿ ಒಂದು ಲಕ್ಷ ಮುಂಗಡ ಹಣವನ್ನು ಪಡೆಯು ತ್ತಿದ್ದ ವೇಳೆ ದಾಳಿ ಮಾಡಿ ಮನೋಹರ್ ಹಾಗೂ ಶಂಕರ್ ನನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
