SSLC ತರಗತಿ ಪಾಸ್ ಆಗಿದ್ದರೇ ಸಾಕು, ಈ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಬಹುದು. ಖಾಲಿ ಇರುವ ಹೋಂ ಗಾರ್ಡ್ ಅಥವಾ ಗೃಹ ರಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅರ್ಜಿ ಸಲ್ಲಿಸುವ ಅವಕಾಶವಿದೆ.
ಅರ್ಹತೆಗಳು :
SSLC ತರಗತಿ ಪಾಸ್ ಆಗಿರಬೇಕು. ಅಭ್ಯರ್ಥಿಯು 19 ವರ್ಷದಿಂದ 50 ವರ್ಷದ ಒಳಗಿರಬೇಕು. ಪುರುಷ ಅಭ್ಯರ್ಥಿ 163 ಸೆ.ಮೀ ಎತ್ತರವಿರಬೇಕು. ಮಹಿಳಾ ಅಭ್ಯರ್ಥಿ 150 ಸೆ.ಮೀ ಎತ್ತರವಿರಬೇಕು. ಯಾವುದೇ Criminal ಹಿನ್ನೆಲೆ ಇರಬಾರದು.
ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಮೆಡಿಕಲ್ ಫಿಟ್ನೆಸ್ (Medical fitness) ಪ್ರಮಾಣ ಪತ್ರ. ಆಧಾರ ಕಾರ್ಡ್/Aadhar card. SSLC ಅಂಕ ಪಟ್ಟಿ. (ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತ ಮಾಡಿಕೊಂಡು ಅರ್ಜಿ ಜೊತೆಗೆ ಸಲ್ಲಿಸಬೇಕು).
ಪ್ರಥಮ ಆದ್ಯತೆ :
ಹೆವಿ ಡ್ರೈವಿಂಗ್ ಲೈಸೆನ್ಸ್ ಹೊಂದುದವರು. ಅಡುಗೆ ಭಟ್ಟರು, Mechanic/Painter/Plumber. ಕಂಪ್ಯೂಟರ್ ಜ್ಞಾನ, NCC ಹಾಗೂ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಇದ್ದವರು.
ಅರ್ಜಿ ಉಚಿತವಾಗಿ ಪಡೆಯುವ/ನೀಡುವ ವಿಳಾಸ
ಗೃಹ ರಕ್ಷಕ ದಳದ ಜಿಲ್ಲಾ ಕಚೇರಿ, ಸರ್ವೋದಯ ನಗರ, ದಿವಕರ್ ಕಾಮರ್ಸ್ ಕಾಲೇಜ್ ಎದುರು, ಕೊಡಿಭಾಗ, ಕಾರವಾರ. (Home Guard District Office, Sarvodaya Nagar, Opp Diwakar Commerce College, Kodibhaga, Karwar).
ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಿಷ್ಠ ರೂ. 8000/- ಯಿಂದ ಗರಿಷ್ಠ ರೂ. 15,000/- ವರೆಗೆ (Per month). ಪ್ರಮುಖ ದಿನಾಂಕ :
ಭರ್ತಿ ಮಾಡಿದ ಅರ್ಜಿ ನೀಡಲು ಕೊನೆ ದಿನಾಂಕ ಮಾರ್ಚ್ 07, 2025 ಆಗಿದೆ. ಹೆಚ್ಚಿನ ಮಾಹಿತಿಗೆ : 08382 -200137/ 226361 ಅಥವಾ 9480898775 ಸಂಪರ್ಕಿಸಬಹುದು.