ಭುವನೇಶ್ವರ : ಬೆಂಗಳೂರಿನಿಂದ ಅಸ್ಸಾಂನ ಗುವಾಹಟಿಗೆ ಸಂಚರಿಸುತ್ತಿದ್ದ ಕಾಮಾಕ್ಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಕನಿಷ್ಠ 11 ಬೋಗಿಗಳು ಒಡಿಶಾದಲ್ಲಿ ಹಳಿ ತಪ್ಪಿದೆ.
ಚೌದ್ವಾರ ಪ್ರದೇಶದ ಮಂಗೂಲಿಯ ಪ್ಯಾಸೆಂಜರ್ ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಬೆಳಿಗ್ಗೆ 11:54 ಕ್ಕೆ ಹಳಿ ತಪ್ಪಿದ್ದು, ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಬಿ -6 ರಿಂದ ಬಿ -14 ವರೆಗಿನ ಬೋಗಿಗಳು ಹಳಿ ತಪ್ಪಿವೆ. ಹಳಿ ತಪ್ಪಿದ ರೈಲಿನ ಬೋಗಿಗಳು ಹೊಲದಲ್ಲಿ ಇಳಿದಿದೆ. ರೈಲು ಹಳಿ ತಪ್ಪಿದ ವೇಳೆ ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ. ರೈಲು ಹಳಿ ತಪ್ಪಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟಿದ್ದ ಕಾಮಾಕ್ಯ ಎಕ್ಸ್‌ಪ್ರೆಸ್ ರೈಲು ಇದಾಗಿತ್ತು. ಈ ರೈಲು ತಮಿಳುನಾಡು, ಆಧ್ರಪ್ರದೇಶ, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದ ಮೂಲಕ ಅಸ್ಸಾಂ ಗುವಾಹಟಿಗೆ ತೆರಳುತ್ತಿತ್ತು.