ಮಧ್ಯಪ್ರದೇಶ: ಗಣ್ಯ ವ್ಯಕ್ತಿಗಳ ರಕ್ಷಣೆಗಾಗಿ ಕೋಟಿ ಕೋಟಿ ಖರ್ಚು ಮಾಡುವುದನ್ನು ಕೇಳುತ್ತಿರುತ್ತೇವೆ. ಆದರೆ, ಮಧ್ಯಪ್ರದೇಶದ ಸಾಲಮತ್‌ಪುರದಲ್ಲಿರುವ ರಾವಿ ಮರದ ರಕ್ಷಣೆಗೆ ಸರ್ಕಾರ ವಾರ್ಷಿಕ 12 ಲಕ್ಷ ರೂ. ಖರ್ಚು ಮಾಡುತ್ತಿದೆ.
ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ಜಾತಿಗೆ ಈ ಮರ ಸೇರಿರುವುದು ವಿಶೇಷವಾಗಿದೆ. 2012ರಲ್ಲಿ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ಆ ದೇಶದಿಂದ ಗಿಡ ತಂದು ನೆಟ್ಟಿದ್ದರು. ಈ ವಿವಿಐಪಿ ಮರವನ್ನು ನಾಲ್ವರು ಭದ್ರತಾ ಸಿಬ್ಬಂದಿ ನಿರಂತರವಾಗಿ ಕಾಯುತ್ತಿದ್ದಾರೆ.