ದಾವಣಗೆರೆ : ಜಾನುವಾರುಗಳಿಗೆಂದು ಸಂಗ್ರಹಿಸಿದ್ದ 12 ಲೋಡ್ ರಾಗಿ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಸಂಪೂರ್ಣ ಭಸ್ಮವಾದ ಘಟನೆ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಗಳೂರಿನ ವ್ಯಾಸಗೊಂಡನಹಳ್ಳಿಯ ತಿಪ್ಪೇಸ್ವಾಮಿ ಎನ್ನುವ ರೈತರಿಗೆ ಸೇರಿದ್ದ ರಾಗಿ ಹುಲ್ಲಿನ ಬಣವೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಗ್ರಾಮಸ್ಥರು ಬೆಂಕಿ ನಂದಿಸಲು ಹರ ಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ಅಗ್ನಿಶಾಮಕ ವಾಹನಗಳು ಬೆಂಗಳೂರಿನ ಏರ್ ಶೋಗೆ ತೆರಳಿದ್ದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನಗಳು ಸಿಗದೆ ರೈತರು ಪರದಾಡಿದ್ದಾರೆ. ಅಗ್ನಿ ಅವಘಡದಿಂದ ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ.