SBI ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ ಮಾಡಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಆಸಕ್ತರು ಜನವರಿ 7ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ
13,735 ಉದ್ಯೋಗಗಳನ್ನು ಸದ್ಯ SBI ಭರ್ತಿ ಮಾಡಲು ನಿರ್ಧರಿಸಿದೆ. ಈ ಬೃಹತ್ ಪ್ರಮಾಣದ ನೇಮಕಾತಿಯಲ್ಲಿ ಕರ್ನಾಟಕಕ್ಕೂ 203 ಹುದ್ದೆಗಳು ಇವೆ. 2024ರ ಕೊನೆಯಲ್ಲಿ SBI ದೊಡ್ಡ ಮಟ್ಟದ ಉದ್ಯೋಗ ನೇಮಕ ಬಗ್ಗೆ ನೋಟಿಫಿಕೆಶನ್ ಹೊರಡಿಸಿತ್ತು. ಅದರಂತೆ ಕೊನೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಅರ್ಜಿ ಸಲ್ಲಿಸದೇ ಇರುವವರು ಈ ಕೂಡಲೇ ಸಲ್ಲಿಸಬಹುದು.
SBI ಜೂನಿಯರ್ ಅಸೋಸಿಯೇಟ್ (Customer Support & Sales)/ Clerk ಹುದ್ದೆಗಳನ್ನು ತುಂಬುತ್ತಿದೆ.
ವೇತನ:ತಿಂಗಳಿಗೆ 24,050 ರಿಂದ 64,480 ರೂಪಾಯಿಗಳ ವೇತನ
ವಿದ್ಯಾರ್ಹತೆ: ಪದವಿಯನ್ನು ಪೂರ್ಣಗೊಳಿಸಿರಬೇಕು
20 ರಿಂದ 28 ವಯಸ್ಸು ಆಗಿರಬೇಕು. ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಜನರಲ್, ಒಬಿಸಿ ಹಾಗೂ ಇಡಬ್ಲುಎಸ್ ಸೇರಿ ಉಳಿದವರು 750 ರೂಪಾಯಿಗಳನ್ನು ಬ್ಯಾಂಕ್ ಗೆ ಪಾವತಿಸಬೇಕು.
ಇನ್ನು ಆಯ್ಕೆ ಪ್ರಕ್ರಿಯೆಗೆ ಬಂದರೆ ಮೊದಲು ಪೂರ್ವಭಾವಿ ಪರೀಕ್ಷೆ (Preliminary Exam), ಬಳಿಕ ಮುಖ್ಯ ಪರೀಕ್ಷೆ (Mains Exam) ಹಾಗೂ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಎಂದು 3 ಹಂತದಲ್ಲಿ ಎಕ್ಸಾಂ ಇರುತ್ತವೆ. ಈ ಪರೀಕ್ಷೆಗಳಲ್ಲಿ 4 ಪ್ರಶ್ನೆಗಳನ್ನು ತಪ್ಪಾಗಿ ಟಿಕ್ ಮಾಡಿದರೆ 1 ಅಂಕ ಕಡಿತ ಮಾಡಲಾಗುತ್ತದೆ. ಈ SBI ಅರ್ಜಿಗಳು 17 ಡಿಸೆಂಬರ್ನಲ್ಲಿ ಆರಂಭವಾಗಿದ್ದು 7 ಜನವರಿಯಂದು ಕೊನೆಗೊಳ್ಳುತ್ತವೆ. ಅರ್ಜಿ ಸಲ್ಲಿಕೆಗೆ ವೆಬ್ಸೈಟ್- https://ibpsonline.ibps.in/sbidrjadec24/