ಅಮೃತಸರ: ನಕಲಿ ಮದ್ಯ ಸೇವಿಸಿ 14 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಎರಡು ಎಫ್ಐಆರ್ಗಳು ದಾಖಲಾಗಿವೆ. ಭಂಗಾಲಿ, ಪಾತಾಳಪುರಿ, ಮರಾರಿ ಕಾಲನ್, ಥೆರೆವಾಲ್ ಮತ್ತು ತಲ್ವಂಡಿ ಘುಮಾನ್ ಎಂಬ ಐದು ಗ್ರಾಮಗಳಲ್ಲಿ ಸಾವುಗಳು ಸಂಭವಿಸಿವೆ.
ಸೋಮವಾರ ರಾತ್ರಿ 9.30 ರ ಸುಮಾರಿಗೆ ಇಲ್ಲಿ ನಕಲಿ ಮದ್ಯ ಸೇವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾವು ತಕ್ಷಣ ಕ್ರಮ ಕೈಗೊಂಡು ನಾಲ್ವರನ್ನು ಬಂಧಿಸಿದ್ದೇವೆ. ಮುಖ್ಯ ಪೂರೈಕೆದಾರ ಪರಬ್ಜೀತ್ ಸಿಂಗ್ ಅವರನ್ನು ಬಂಧಿಸಿದ್ದೇವೆ. ಅವರನ್ನು ವಿಚಾರಣೆ ನಡೆಸಿದಾಗ ಪ್ರಮುಖ ಪೂರೈಕೆದಾರ ಸಾಹಬ್ ಸಿಂಗ್ ಬಗ್ಗೆ ತಿಳಿದುಬಂದಿದೆ.