ನವದೆಹಲಿ: ನಗದು ಕೊರತೆ ಅನುಭವಿಸುತ್ತಿರುವ ಸ್ಪೈಸ್‌ಜೆಟ್ ಸುಮಾರು 1,400 ಉದ್ಯೋಗಿಗಳನ್ನು ವಜಾಗೊಳಿಸಲಿದೆ. ಸದ್ಯ ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಸುಮಾರು 15% ನಷ್ಟು ಭಾಗವನ್ನು ಹೊಂದಿದೆ ಎಂದು ಏರ್‌ಲೈನ್ಸ್ ದಿ ಎಕನಾಮಿಕ್ ಟೈಮ್ಸ್‌ಗೆ ದೃಢಪಡಿಸಿದೆ. ಉದ್ಯೋಗಿಗಳ ವಜಾ ಕ್ರಮವು ವೆಚ್ಚವನ್ನು ಕಡಿತಗೊಳಿಸುವ ಮತ್ತು ಹೂಡಿಕೆದಾರರ ಆಸಕ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಕ್ಯಾರಿಯರ್‌ನ 60 ಕೋಟಿ ರೂಪಾಯಿ ಸಂಬಳದ ಬಿಲ್‌ನಿಂದಾಗಿ ಸಿಬ್ಬಂದಿ ಕಡಿತವು ಅಗತ್ಯವಾಗಿದೆ ಎಂದು ವರದಿಯಾಗಿದೆ, ಬೆಳವಣಿಗೆಯ ಬಗ್ಗೆ ತಿಳಿದ ಜನರು ಹೇಳಿದರು. ವ್ಯವಹಾರಿಕ ಉತ್ತುಂಗ ಸಮಯದಲ್ಲಿ ಅಂದ್ರೆ 2019 ರಲ್ಲಿ, ಸ್ಪೈಸ್‌ಜೆಟ್ 118 ವಿಮಾನಗಳು ಮತ್ತು 16,000 ಉದ್ಯೋಗಿಗಳನ್ನು ಹೊಂದಿತ್ತು. ಆದರೆ ನಗದು ಕೊರತೆಯಿಂದಾಗಿ ಉದ್ಯೋಗಿಗಳನ್ನು ಕೈಬಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಉದ್ಯೋಗಿಗಳಿಗೆ ಕರೆ ಮಾಡಿ ವಜಾ ಗೊಳಿಸಲಾಗುತ್ತಿದೆ ಎಂದು ಸ್ಪೈಸ್‌ಜೆಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.