ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಏಕದಿನ ವಿಶ್ವಕಪ್ ನೀಡಿದ ಅದ್ಭುತ ನಾಯಕ. ಮೂರು ಐಸಿಸಿ ಟ್ರೋಫಿಗಳನ್ನು ಸೇರಿಸುವ ಮೂಲಕ ಧೋನಿ ಇತಿಹಾಸ ಸೃಷ್ಟಿಸಿದ್ದಾರೆ. ಸದ್ಯ ಅವರ ಬಗ್ಗೆ ಬಿಸಿ ಚರ್ಚೆಯೊಂದು ಶುರುವಾಗಿದ್ದು, ವಂಚನೆ ಕೇಸ್ನಲ್ಲಿ ಧೋನಿಗೆ ಸಂಕಷ್ಟ ಎದುರಾಗಿದೆ. ಧೋನಿ ಮತ್ತು ಅವರ ಬಿಜಿನೆಸ್ ಪಾಲುದಾರ ಮಿಹಿರ್ ದಿವಾಕರ್ ನಡುವೆ ಈಗಾಗಲೇ ವಂಚನೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದೀಗ ಅದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ನಿವಾಸಿ ರಾಜೇಶ್ ಕುಮಾರ್ ಮೌರ್ಯ ಎಂಬುವರು ದೂರು ದಾಖಲಿಸಿದ್ದಾರೆ. ಕ್ರಿಕೆಟ್ ಅಕಾಡೆಮಿ ನಿರ್ವಹಿಸುವ ವಿಚಾರದಲ್ಲಿ ಧೋನಿ 15 ಕೋಟಿ ರೂ. ವಂಚಿಸಿದ್ದಾರೆಂದು ಆಪಾದನೆ ಮಾಡಿದ್ದಾರೆ. ಬಿಸಿಸಿಐ ನಿಯಮ 39ರ ಪ್ರಕಾರ ಬಿಸಿಸಿಐ ಎಥಿಕ್ಸ್ ಕಮಿಟಿಲ್ಲಿ ಧೋನಿ ವಿರುದ್ಧ ದೂರು ದಾಖಲಿಸಲಾಗಿದೆ. ಆಗಸ್ಟ್ 30ರೊಳಗೆ ಈ ಬಗ್ಗೆ ವಿವರಣೆ ನೀಡುವಂತೆ ಬಿಸಿಸಿಐ ಧೋನಿ ಅವರಿಗೆ ಸೂಚನೆ ನೀಡಿದೆ. ಧೋನಿ ಅವರು ಈಗಾಗಲೇ ಮಿಹಿರ್ ದಿವಾಕರ್ ಎಂಬುವರ ವಿರುದ್ಧ ರಾಂಚಿ ಸಿವಿಲ್ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ. ಮಾತ್ರವಲ್ಲದೆ, ಸೌಮ್ಯ ದಾಸ್ ಮತ್ತು ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ವಂಚನೆ ಆರೋಪಗಳನ್ನು ಮಾಡಿದ್ದಾರೆ. ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ 2021ರಲ್ಲಿ ಧೋನಿ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ತೆರೆದಿದೆ. ಆದರೆ, ಧೋನಿ ಅವರಿಗೆ ಗೊತ್ತಿಲ್ಲದೆ ಅನೇಕ ಅಕಾಡೆಮಿಗಳನ್ನು ತೆರೆಯಲಾಗಿದೆ ಎಂದು ಧೋನಿ ಪರ ವಕೀಲರು ಆರೋಪ ಮಾಡಿದ್ದಾರೆ. ಅಲ್ಲದೆ, ಒಪ್ಪಂದದ ಪ್ರಕಾರ ಅರ್ಕಾ ಕಂಪನಿ ತನಗೆ ನೀಡಬೇಕಾದ ಹಣವನ್ನು ನೀಡಿಲ್ಲ ಎಂದು ಧೋನಿ ದೂರಿದ್ದಾರೆ. ರಾಂಚಿ ಸಿವಿಲ್ ಕೋರ್ಟ್ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಇದೀಗ ಅದೇ ಅರ್ಕಾ ಸಂಸ್ಥೆಗೆ ಸೇರಿದ ರಾಜೇಶ್ ಕುಮಾರ್ ತಮಗೆ ಧೋನಿ 15 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಬಿಸಿಸಿಐಗೆ ದೂರು ನೀಡಿದ್ದಾರೆ. ಇದೀಗ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಆರೋಪಕ್ಕೆ ಧೋನಿ ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
15 ಕೋಟಿ ರೂ. ವಂಚನೆ ಕೇಸ್ನಲ್ಲಿ ಧೋನಿಗೆ ಸಂಕಷ್ಟ : ಸ್ಪಷ್ಟನೆ ಕೊಡಿ ಎಂದ BCCI
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಅಯೋಧ್ಯೆಯಲ್ಲಿ ದಲಿತ ಯುವತಿಯ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
3 February 2025
ಗಂಡನ ಕಿಡ್ನಿ ಮಾರಿ ಪ್ರಿಯಕರನ ಜೊತೆ ಪತ್ನಿ ಪರಾರಿ
3 February 2025
INDvsENG 5th T20: ಪ್ರಮುಖ ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ..!
3 February 2025
ಬೆಂಗಳೂರಿನಲ್ಲಿ 837 ಕೆರೆಗಳ ಪೈಕಿ 730 ಕೆರೆಗಳು ಒತ್ತುವರಿ
3 February 2025
LATEST Post
ಪ್ರೇಮಿಗಳಿಗೆ ಗುಡ್ ನ್ಯೂಸ್ ನೀಡಿದ ಓಯೋ
3 February 2025
18:08
ಪ್ರೇಮಿಗಳಿಗೆ ಗುಡ್ ನ್ಯೂಸ್ ನೀಡಿದ ಓಯೋ
3 February 2025
18:08
ಬಿಗ್ ಬಾಸ್ ಮನೆಯಲ್ಲಿ ಬೇರೊಬ್ಬನ ಜೊತೆ ಸ್ನೇಹ, ಗಂಡನಿಂದ ದೂರಾದ ಕಿರುತೆರೆ ನಟಿ
3 February 2025
17:41
545 ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ಡಾ.ಅಶ್ವತ್ಥ್ ನಾರಾಯಣರನ್ನು ವಿಶೇಷ ತನಿಖಾ ತಂಡ ವಿಚಾರಣೆ
3 February 2025
17:25
ಅಯೋಧ್ಯೆಯಲ್ಲಿ ದಲಿತ ಯುವತಿಯ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
3 February 2025
17:17
ಇಸ್ಲಾಂನಲ್ಲಿ ನಂಬಿಕೆ ಇಲ್ಲ, ಮುಸ್ಲಿಂ ಹುಡುಗನ ಎಂದಿಗೂ ಮದುವೆಯಾಗಲ್ಲ- ಉರ್ಫಿ ಜಾವೆದ್
3 February 2025
16:32
ಗಂಡನ ಕಿಡ್ನಿ ಮಾರಿ ಪ್ರಿಯಕರನ ಜೊತೆ ಪತ್ನಿ ಪರಾರಿ
3 February 2025
16:02
ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
3 February 2025
15:19
‘ಮತ್ತೆ ರಾಜ್ಯಾಧ್ಯಕ್ಷನಾಗಿ ಪಕ್ಷ ಬಲಪಡಿಸ್ತೇನೆ’- ಬಿ.ವೈ.ವಿಜಯೇಂದ್ರ ವಿಶ್ವಾಸ
3 February 2025
15:12
ಫೆ. 5ರಂದು ದೆಹಲಿ ಚುನಾವಣೆ – ಪ್ರಮುಖ ಮೂರು ರಾಜಕೀಯ ಪಕ್ಷಗಳಿಂದ ಭರದ ಪ್ರಚಾರ
3 February 2025
15:11
ವಾಹನ ಸವಾರರರೇ ಹುಷಾರ್ : ಈ ಕೆಲಸ ಮಾಡಿದ್ರೆ ನಿಮ್ಮ ಲೈಸೆನ್ಸ್ ರದ್ದಾಗುತ್ತೆ….!
3 February 2025
13:49
INDvsENG 5th T20: ಪ್ರಮುಖ ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ..!
3 February 2025
13:42
ಬೆಂಗಳೂರಿನಲ್ಲಿ 837 ಕೆರೆಗಳ ಪೈಕಿ 730 ಕೆರೆಗಳು ಒತ್ತುವರಿ
3 February 2025
13:40
ಸೆಂಟ್ರಲ್ ಬ್ಯಾಂಕ್ನಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನ
3 February 2025
12:02
ಗೃಹರಕ್ಷಕ ದಳದ ಸಿಬ್ಬಂದಿಯ ಬಂಧನ..!! ಕಾರಣ??
3 February 2025
11:47
ಅಯೋಧ್ಯೆಯಲ್ಲಿ 22 ವರ್ಷದ ಯುವತಿಯ ಅತ್ಯಾಚಾರ, ಕೊಲೆ- ಕಣ್ಣೀರಿಟ್ಟ ಸಂಸದ
3 February 2025
11:44
ಆಧಾರ ಕಾರ್ಡ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ
3 February 2025
11:39
ಹಿಂದೂ ಧರ್ಮ ಎಂದರೆ ಯಾರನ್ನೂ ಬಲವಂತವಾಗಿ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸುವುದಲ್ಲ: ತರೂರ್
3 February 2025
11:16
ಮಹಾ ಕುಂಭ ಮೇಳದಲ್ಲಿ ‘ಅಮೃತ ಸ್ನಾನ’ ಕ್ಕಾಗಿ ‘ಆಪರೇಷನ್ ಇಲೆವೆನ್’
3 February 2025
11:12
ಸಂಗೀತ ಕಾರ್ಯಕ್ರಮದಲ್ಲೇ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
3 February 2025
10:22
ನ್ಯಾಕ್ ಗ್ರೇಡ್ ಕೊಡಲು ಲಂಚ ಪಡೆದ ವಿವಿ ಪ್ರಾಧ್ಯಾಪಕಿ ಬಂಧನ
3 February 2025
10:18
ವಸಂತ ಪಂಚಮಿಯ ಪವಿತ್ರ ದಿನ- ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ 3ನೇ ಅಮೃತಸ್ನಾನ
3 February 2025
09:43
ಐರ್ಲೆಂಡ್ನಲ್ಲಿ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯರು ಸಾವು.!
3 February 2025
09:41
ಉಡುಪಿ: ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟುಗೆ ವೈದ್ಯಕೀಯ ಪರೀಕ್ಷೆ , ನ್ಯಾಯಾಂಗ ಬಂಧನ
3 February 2025
09:40
ಐಎಎಸ್ ಅಧಿಕಾರಿ ಮುದ್ರಾ ಗೈರೋಲಾ ಯಶಸ್ಸಿನ ಪಯಣದ ಕಥನ
3 February 2025
09:02
ವಚನ—ಕಲಕೇತಯ್ಯ !
3 February 2025
07:14
‘ಕನ್ನಡಿಗರ ಋಣ ತೀರಿಸಲು ನಿರ್ಮಲಾ ಸೀತಾರಾಮನ್ ವಿಶೇಷ ಪ್ಯಾಕೇಜ್ ಘೋಷಿಸಲಿ’- ಪ್ರಿಯಾಂಕ್ ಖರ್ಗೆ
2 February 2025
18:02
ಅಮೆರಿಕದಲ್ಲಿ ಮನೆಗಳ ಮೇಲೆ ವಿಮಾನ ಪತನ
2 February 2025
17:09
ರೈಲ್ವೆ ನಿಲ್ದಾಣದೊಳಗೆ ನುಗ್ಗಿದ ಕಾರು – ತಪ್ಪಿದ ಭಾರೀ ಅನಾಹುತ
2 February 2025
16:45
‘ಮಧ್ಯಮವರ್ಗದವರಿಗೆ ಸ್ನೇಹಪೂರಿತ ಬಜೆಟ್’ – ಪ್ರಧಾನಿ ಮೋದಿ
2 February 2025
16:44
ಕಾರ್ಮಿಕರಿಗೆ ಗುಡ್ ನ್ಯೂಸ್: ಮದುವೆಗೆ ಸಿಗಲಿದೆ 60,000 ರೂ.ಸಹಾಯಧನ
2 February 2025
15:46
ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಭಾರೀ ಸೌಲಭ್ಯಗಳು
2 February 2025
15:31
ಪತಂಜಲಿ ಬಾಬಾ ರಾಮ್ದೇವ್ ವಿರುದ್ದ ಜಾಮೀನು ರಹಿತ ಬಂಧನ ವಾರಂಟ್!!
2 February 2025
15:06
ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಾಹಾ
2 February 2025
14:07