ಆತ್ಮ ನಿರ್ಭರ ಭಾರತ ಕಾನ್ಸೆಪ್ಟ್ ಭಾಗವಾಗಿ 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಕೈಗಾರಿಕಾ ಮಂತ್ರಾಲಯವು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು (PM Micro Food Processing Scheme-PMFME) 2020-21 ರಲ್ಲಿ ಜಾರಿಗೊಳಿಸಿತು.
ರೈತರು ಮತ್ತು ರೈತ ಮಹಿಳೆಯರಿಗೆ ತಾವು ಬೆಳೆದ ಬೆಳೆಗಳನ್ನೇ ಬಳಸಿಕೊಂಡು ಕಿರು ಉದ್ದಿಮೆ ಆರಂಭಿಸಿಕೊಳ್ಳಲು ಈ ಯೋಜನೆಯು ಅದ್ಭುತ ವೇದಿಕೆ ಸೃಷ್ಟಿಸಿ ಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಸರ್ಕಾರಗಳ ಜೊತೆಯಾಗಿ ಕೇಂದ್ರ ಸರ್ಕಾರವು ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಸದುದ್ದೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆ ಮೂಲಕ ಗರಿಷ್ಠ ರೂ. 15 ಲಕ್ಷದವರೆಗೆ ತಮ್ಮ ಉದ್ಯಮ ಸ್ಥಾಪನೆಗೆ ಹಾಗೂ ಅಭಿವೃದ್ಧಿಗಾಗಿ ಫಲಾನುಭವಿಗಳು ಸಬ್ಸಿಡಿ ಪಡೆಯುತ್ತಾರೆ. ಈ ಯೋಜನೆಯಿಂದ ಒಟ್ಟು ಎಷ್ಟು ಅನುದಾನ ಪಡೆಯಬಹುದು? ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆ ನೀಡಬೇಕು?
ಯೋಜನೆಯ ಹೆಸರು:- ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು (PM Micro Food Processing Scheme-PMFME)
ಯೋಜನೆಯ ಉದ್ದೇಶ:-
- ಅಸಂಘಟಿತ ವಲಯದ ಸಣ್ಣ ಆಹಾರ ಸಂಸ್ಕರಣ ಉದ್ದಿಮೆ ಗಳಿಗೆ ಪ್ರೋತ್ಸಾಹ ನೀಡಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ ಸಂಘಟಿತ ವಲಯಕ್ಕೆ ತರುವುದು
- ಈ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ರೈತ ಉತ್ಪಾದಕ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಿ ಈ ಗುಂಪುಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು.
ಸಿಗುವ ಅನುದಾನ:-
- ಈ ಯೋಜನೆಯ ಗರಿಷ್ಠ ಮೊತ್ತ ರೂ. 30 ಲಕ್ಷ
- ಈ ಯೋಜನೆಯ ವೆಚ್ಚದ ಶೇ.35% ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಕೇಂದ್ರ ಸರ್ಕಾರದ ಸಹಾಯಧನ ಜೊತೆಗೆ ಹೆಚ್ಚುವರಿ ಶೇ.15% ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗುತ್ತದೆ.
- ಸಬ್ಸಿಡಿ ಗರಿಷ್ಠ ಮಿತಿ 15 ಲಕ್ಷಗಳು
- ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮತ್ತಿತರಗಳಿಗೆ ಸರ್ಕಾರದಿಂದ ಹೆಚ್ಚಿನ ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಮಾನದಂಡಗಳು:-
* ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
* ಪ್ರಸ್ತುತವಾಗಿ ಕಿರು ಆಹಾರ ಸಂಸ್ಕರಣಾ ಘಟಕಗಳಾಗಿ ಕಾರ್ಯ ನಿರ್ವಹಿಸುತ್ತಿರಬೇಕು.
* ODOP ಉತ್ಪನ್ನಗಳಿಗಾಗಿ SLUPಯಲ್ಲಿ ಗುರುತಿಸಿಕೊಂಡ ಘಟಕವಾಗಿರಬೇಕು (or) ವೈಯಕ್ತಿಕವಾಗಿ ಸಂಪನ್ಮೂಲ ವ್ಯಕ್ತಿಯೇ ಪರಿಶೀಲನೆ ಮಾಡಿರುವಂತಹ ಘಟಕಗಳಾಗಿರಬೇಕು.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು:-
- ರೊಟ್ಟಿ / ಚಪಾತಿ ತಯಾರಿಕೆ
- ಶಾವಿಗೆ ತಯಾರಿಕೆ
- ಹಪ್ಪಳ ತಯಾರಿಕೆ
- ಬೇಕರಿ ಪದಾರ್ಥಗಳು
- ಚಕ್ಕಲಿ ತಯಾರಿಕೆ
- ಸಿರಿಧಾನ್ಯ ಸಂಸ್ಕರಣೆ
- ಹಿಟ್ಟು ಅಥವಾ ರವಾ ತಯಾರಿಕೆ
- ಶೇಂಗಾ ಪದಾರ್ಥಗಳು
- ಅಡುಗೆ ಎಣ್ಣೆ ತಯಾರಿಕೆ
- ಖಾರದಪುಡಿ ಹಾಗೂ ಮಸಾಲೆ ಪದಾರ್ಥ ತಯಾರಿಕೆ
- ಹುಣಸೆ ಹಣ್ಣಿನ ಪದಾರ್ಥಗಳ ತಯಾರಿಕೆ
- ಸಾವಯವ ಉದ್ಯಮ
- ಕುರುಕಲು ತಿಂಡಿ ತಯಾರಿಕೆ
- ಉಪ್ಪಿನಕಾಯಿ ತಯಾರಿಕೆ
- ಹಾಲಿನ ಉತ್ಪನ್ನಗಳು ತಯಾರಿಕೆ
- ಇತ್ಯಾದಿ ಕಿರು ಉದ್ಯಮಗಳು
ಅರ್ಜಿ ಸಲ್ಲಿಸುವ ವಿಧಾನ:-
https://pmfme.mofpi.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಬೇಕು.
* ಹೆಚ್ಚಿನ ಮಾಹಿತಿಗಾಗಿ PMFME ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಂಪರ್ಕಿಸಬಹುದು.
ಬೇಕಾಗುವ ದಾಖಲೆಗಳು:-
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರ
- ಯೋಜನಾ ಘಟಕದ ವಿವರ
- ಉದ್ಯೋಗ ಸ್ಥಳದ ಉತಾರ
- ವಿದ್ಯುತ್ ಬಿಲ್
- MSME ಲೈಸೆನ್ಸ್
- ಯೋಜನಾ ಘಟಕದಲ್ಲಿ ಬಳಿ ನಿಂತು ತೆಗೆಸಿಕೊಂಡಿರುವ ಫೋಟೋ
- ಇನ್ನಿತ್ಯಾದಿ ಪ್ರಮುಖ ದಾಖಲೆಗಳು.