ಅಮೆರಿಕ: ಟ್ರಕ್ ನುಗ್ಗಿಸಿ 15 ಮಂದಿಯ ಹತ್ಯೆ ಮಾಡಿರುವ ಘಟನೆ ಅಮೆರಿಕದ ನ್ಯೂ ಓರ್ಲಿಯನ್ಸ್ ನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ನ್ಯೂ ಓರ್ಲಿಯನ್ಸ್ ನಲ್ಲಿ ಜನ ಸಮೂಹ ಹೊಸ ವರ್ಷಾಚರಣೆ ಪಾರ್ಟಿಯ ಸಂಭ್ರಮದಲ್ಲಿದ್ದಾಗ ಟ್ರಕ್ ನುಗ್ಗಿಸಲಾಗಿತ್ತು.
ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಗಾಯಗೊಂಡು ಆಸಪ್ತ್ರೆಗೆ ದಾಖಲಾಗಿದ್ದ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ದಾಳಿ ಹಿಂದೆ ಐಸಿಸ್ ಉಗ್ರರ ಕೈವಾಡ ಇರಬಹುದು ಎನ್ನುವುದು ದೃಢಪಟ್ಟಿದೆ. ಟ್ರಕ್ ನಲ್ಲಿ ಐಸಿಸ್ ಧ್ವಜ, ಸ್ಪೋಟಕ ಸೇರಿ ಅನೇಕ ವಸ್ತುಗಳು ಪತ್ತೆಯಾಗಿವೆ.