ನವದೆಹಲಿ: T20 ವಿಶ್ವಕಪ್ 2024 ವಿಜೇತ ಟೀಂ ಇಂಡಿಯಾ ತಂಡ ಮತ್ತು ಸಹಾಯಕ ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಶೇಷ ಚಾರ್ಟರ್ಡ್ ಫ್ಲೈಟ್ ‘AIC24WC’ 15 ಗಂಟೆಗಳ ಪ್ರಯಾಣದ ನಂತರ ದೆಹಲಿಗೆ ಬಂದಿಳಿದಿದೆ. ಬೆರಿಲ್ ಚಂಡಮಾರುತದಿಂದಾಗಿ ತಂಡವು ಬಾರ್ಬಡೋಸ್‌ನಿಂದ ಹೊರಡುವುದು ತಡವಾಯಿತು. ಬಿಸಿಸಿಐ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ. ಜೂನ್ 29 ರಂದು ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ತನ್ನ ಎರಡನೇ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
