ಚಿತ್ರದುರ್ಗ: ಕರ್ನಾಟಕದ ಎರಡನೇ ಶಬರಿಮಲೆ ಎಂದು ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗ ಮೆದಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ. ಕರ್ನಾಟಕ ರಾಜ್ಯದಂತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಬಂದು ದರ್ಶನ ಪಡೆಯುತ್ತಿದ್ದಾರೆ. ಎಂದು. ಶರಣ್ ಕುಮಾರ್ ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ( ರೀ) ಚಿತ್ರದುರ್ಗ. ಇವರು ಹೇಳಿದ್ದಾರೆ.
ಶುಕ್ರವಾರ ದಿನದಂದು ಬೆಳಗಿನ ಜಾವ . ಬೆಳಗಾಂ ಜಿಲ್ಲೆಯಿಂದ ಮಾಲಾಧಾರಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಆಗಮಿಸಿ 18 ಮೆಟ್ಟಿಲುಗಳ ಪಡಿ ಹತ್ತುವ ಮೂಲಕ ಅಯ್ಯಪ್ಪನ ದೇವರ ದರ್ಶನವನ್ನು ಪಡೆದರು. ಕಾರಣ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅತಿಹೆಚ್ಚಿನ ಭಕ್ತಾದಿಗಳು ಆಗಮಿಸಿ ಸರಿಯಾದ ರೀತಿಯಲ್ಲಿ ಅಯ್ಯಪ್ಪನ ದರ್ಶನ ಪಡೆಯಲಿಕ್ಕೆ ಆಗುವುದಿಲ್ಲ ಹಾಗೂ ಅನೇಕ ತೊಂದರೆಗಳ ಒಳಪಟ್ಟ ಮಾಲಾಧಾರಿ ಸ್ವಾಮಿಗಳು ಚಿತ್ರದುರ್ಗಕ್ಕೆ ಬಂದು ಅಯ್ಯಪ್ಪನ ದರ್ಶನವನ್ನು ಪಡೆಯುತ್ತಿದ್ದಾರೆ.
ಬಂದಿರುವ ಭಕ್ತಾದಿಗಳಿಗೆ ರಾತ್ರಿ ಮಲಗುವ ವ್ಯವಸ್ಥೆಯನ್ನು ಹಾಗೂ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ನೀಡಲಾಗುತ್ತಿದೆ ಕಾರ್ಯದರ್ಶಿಯಾದ ಎಂ ಪಿ ವೆಂಕಟೇಶ್ ಹಾಗೂ ಉಪಾಧ್ಯಕ್ಷರದ ಮಲ್ಲಿಕಾರ್ಜುನ ಹೇಳಿಕೆಯಲ್ಲಿ ತಿಳಿಸಿದ್ದಾರೆ.