1971ರ ಭಾರತ – ಪಾಕ್ ಯುದ್ಧದಲ್ಲಿ ಗೆಲುವಿನ ಪ್ರಮುಖ ರೂವಾರಿ ವೀರ ಯೋಧ ಇನ್ನಿಲ್ಲ – ನಿವೃತ್ತ ಕಮಾಂಡ್ ಇಂದರ್‌ಸಿಂಗ್ ನಿಧನ

ರೋಹ್ಟಕ್ : 1971ರ ಭಾರತ – ಪಾಕ್ ಯುದ್ಧದಲ್ಲಿ ಪಿಎನ್‌ಎಸ್ ಘಾಜಿ ಜಲಾಂತರ್ಗಾಮಿಯನ್ನು ಜಲ ಸಮಾಧಿ ಮಾಡಿ ಭಾರತದ ದಿಗ್ವಿಜಯಕ್ಕೆ ಕಾರಣವಾಗಿದ್ದ ನಿವೃತ್ತ ವೀರ ಯೋಧ ಕಮಾಂಡ್ ಇಂದರ್‌ಸಿಂಗ್ ಇಹಲೋಕ ತ್ಯಜಿಸಿದ್ದಾರೆ. 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ನೌಕಾ ಪಡೆಯ ಪಿಎನ್‌ಎಸ್ ಘಾಜಿ ಜಲಾಂತರ್ಗಾಮಿ ನೌಕೆಯನ್ನು ಧ್ವಂಸ ಮಾಡಿದ ಕೀರ್ತಿಗೆ ಪಾತ್ರವಾಗಿದ್ದ ವೀರ ಯೋಧ ನಿವೃತ್ತ ಕಮಾಂಡ್ ಇಂದರ್ ಸಿಂಗ್ ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಹರ್ಯಾಣದಲ್ಲಿ ವಿಧಿವಶರಾದ ಇಂದರ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಮಂಗಳವಾರ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯ್ತು. ಬಳಿಕ, ಇಲ್ಲಿನ ಶೀಲಾ ಬೈಪಾಸ್ ಬಳಿಯ ರಾಮ್‌ಭಾಗ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯ್ತು. ಅನಾರೋಗ್ಯಕ್ಕೆ ತುತ್ತಾಗಿದ್ದ ಇಂದರ್ ಸಿಂಗ್ ಅವರನ್ನು ಅಕ್ಟೋಬರ್ 2 ರಂದು ಹರ್ಯಾಣದ ರೋಹ್ಟಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದರ್ ಸಿಂಗ್ ಅವರು ಇಹಲೋಕ ತ್ಯಜಿಸಿದ್ದಾರೆ. ಪಾಕ್ ಅಮೆರಿಕದಿಂದ ಪಿಎನ್‌ಎಸ್ ಘಾಜಿ ಜಲಾಂತರ್ಗಾಮಿಯನ್ನು ಖರೀದಿ ಮಾಡಿತ್ತು. ಪಾಕ್ ನೌಕಾ ಪಡೆಯ ಪ್ರಮುಖ ಬಲವೇ ಪಿಎನ್‌ಎಸ್ ಘಾಜಿ. ಅತಿ ವೇಗವಾಗಿ ಸಾಗುವ ದಾಳಿ ಸಬ್‌ಮರಿನ್ ಇದಾಗಿದ್ದು, 1971ರಲ್ಲಿ ಯುದ್ಧ ಆರಂಭವಾದಾಗ ನವೆಂಬರ್ 14 ರಂದು ಕರಾಚಿ ಬಂದರಿನಿಂದ ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮಾರ್ಗವಾಗಿ ಬಂಗಾಳ ಕೊಲ್ಲಿಗೆ ಧಾವಿಸಿತ್ತು. ಭಾರತದ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್‌ ಅನ್ನು ನಾಶ ಮಾಡಬೇಕು ಅನ್ನೋದೇ ಪಿಎನ್‌ಎಸ್ ಘಾಜಿ ಉದ್ದೇಶವಾಗಿತ್ತು. ವಿಶಾಖಪಟ್ಟಣಂ ಬಳಿ ನೌಕಾ ಪಡೆ ಕೇಂದ್ರದ ಬಳಿ ಈ ನೌಕೆ ನಿಯೋಜನೆಯಾಗಿತ್ತು. ಈ ವೇಳೆ ತನಗೆ ವಹಿಸಿದ್ದ ಈ ಜವಾಬ್ದಾರಿಯನ್ನು ಐಎನ್‌ಎಸ್ ರಜಪೂತ್ ಸಮರ್ಥವಾಗಿ ನಿಭಾಯಿಸಿತ್ತು. ಈ ನೌಕೆಯ ಕ್ಯಾಪ್ಟನ್ ಆಗಿದ್ದ ಲೆಫ್ಟೆನೆಂಟ್ ಇಂದರ್ ಸಿಂಗ್, ಪಿಎನ್‌ಎಸ್ ಘಾಜಿ ಜಲಾಂತರ್ಗಾಮಿ ಚಿತ್ತಗಾಂತ್ ತಲುಪುವ ಮುನ್ನವೇ ಅದು ಜಲ ಸಮಾಧಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ಮುಳುಗಿಸಿ ಪೂರ್ವ ಪಾಕಿಸ್ತಾನ ತಲುಪಬೇಕೆಂಬ ಪಿಎನ್‌ಎಸ್ ಘಾಜಿ ಮಹದಾಸೆ ಈಡೇರಲೇ ಇಲ್ಲ. ಈ ಯುದ್ಧದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಪೂರ್ವ ಪಾಕಿಸ್ತಾನವು ಬಾಂಗ್ಲಾ ದೇಶವಾಗಿ ಹೊಸ ರಾಷ್ಟ್ರದ ಉಗಮ ಆಗಿತ್ತು. ಈ ಮಹತ್ಸಾಧನೆ ಮಾಡಿದ ಯುದ್ದ ವೀರ ನಿವೃತ್ತ ಕಮಾಂಡರ್ ಇಂದರ ಸಿಂಗ್, ಇದೀಗ ಅನಾರೋಗ್ಯಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗುವ ಮುನ್ನ 2017ರಲ್ಲಿ ಮಾಧ್ಯಮಗಳ ಜೊತೆ ತಮ್ಮ ಅಂದಿನ ಅನುಭವ ಹಂಚಿಕೊಂಡಿದ್ದ ಇಂದರ್ ಸಿಂಗ್, ನವೆಂಬರ್ 30, 1971ರಲ್ಲಿ ತಮಗೆ ಆ ಆತ್ಮಹತ್ಯಾ ದಾಳಿಯ ಜವಾಬ್ದಾರಿ ವಹಿಸಲಾಗಿತ್ತು ಎಂದು ನೆನಪಿಸಿಕೊಂಡಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement