ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಮಣಿದು ಶಿಕ್ಷಣ ಇಲಾಖೆ ಈ ವರ್ಷಕ್ಕೆ ವಿನಾಯತಿ ನೀಡಿತ್ತು. ಆದರೀಗ ಈ ವಿನಾಯಿತಿಯೇ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಸರ್ಕಾರದ ಈ ಆದೇಶ ಖಂಡಿಸಿ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಲು ಮುಂದಾಗಿದೆ.
ಶಾಲಾ ಶಿಕ್ಷಣ ಇಲಾಖೆ ಹಾಗೂ ಸಚಿವರು ಸುದ್ದಿಗೋಷ್ಠಿ ಮಾಡಿ 2025-26 ನೇ ಸಾಲಿಗೆ ಸಿಮಿತಗೊಳಸಿ ಒಂದು ವರ್ಷ ವಯೋಮಿತಿ ಸಡಲಿಕೆ ಮಾಡಿದೆ. ಈ ವರ್ಷ 1ನೇ ತರಗತಿ ದಾಖಲಾತಿಗೆ 5.5 ವರ್ಷ ತುಂಬಿರಬೇಕು ಹಾಗೂ ಯುಕೆಜಿ ಅಥವಾ ಅಂಗನವಾಡಿ ಗ್ರೇಡ್ – 2 ಕಂಪ್ಲಿಟ್ ಆಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.
ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಹಿಂದೆ ವಯೋಮಿತಿ ವಿಚಾರಕ್ಕೆ ನೀಡಿರುವ ಆದೇಶವನ್ನ ಫಾಲೋ ಮಾಡಿದ್ದೀವಿ. ಇದರ ಪ್ರಕಾರವೇ ದಾಖಲಾತಿ ಕೂಡಾ ಮಾಡಿಸಿಕೊಳ್ಳಲಾಗಿದೆ. ಆದರೆ ಸರ್ಕಾರ ಇದೀಗ 1ನೇ ತರಗತಿ ವಯೋಮಿತಿ ಸಡಿಲಿಕೆ ಮಾಡಿರೋದು ಅತಿದೊಡ್ಡ ಸಮಸ್ಯೆಯಾಗಿದೆ. ಮುಂದಿನ ವರ್ಷಕ್ಕೂ ವಯೋಮಿತಿ ಸಡಲಿಕೆ ನೀಡಬೇಕಾದ ಅವಶ್ಯಕತೆ ಎದುರಾಗಿದೆ ಎಂದು ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.