2ಕೋಟಿ ರೂ. ಸಂಬಳ, ಊಟ-ವಸತಿ ಉಚಿತ: ಆದರೂ ಯಾರೂ ಈ ಉದ್ಯೋಗಕ್ಕೆ ಅಪ್ಲೈ ಮಾಡುತ್ತಿಲ್ಲ ಯಾಕೆ ಗೊತ್ತಾ?

WhatsApp
Telegram
Facebook
Twitter
LinkedIn

ಬೀಜಿಂಗ್: ಎಲ್ಲಾ ದೇಶಗಳಲ್ಲಿ ನಿರುದ್ಯೋಗ ಕಾಡುತ್ತಿದೆ. ಒಂದೊಂದು ಸರ್ಕಾರಿ ಹುದ್ದೆಗೂ ಸಾವಿರಾರು ಮಂದಿ ಅರ್ಜಿ ಹಾಕುತ್ತಿರುತ್ತಾರೆ. ಆದರೆ ಕೆಲವೊಂದು ಉದ್ಯೋಗ ಇದ್ದರೂ, ಜನರು ಅದನ್ನು ಮಾಡಲು ಹಿಂದೇಟು ಹಾಕುತ್ತಿರುತ್ತಾರೆ. ಇಂತಹ ಉದ್ಯೋಗಗಳ ಅರ್ಜಿ ಆಹ್ವಾನ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹವುದೇ ಒಂದು ಉದ್ಯೋಗ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕೆಲಸಕ್ಕೆ ಆಯ್ಕೆಯಾಗುವ ವ್ಯಕ್ತಿಗೆ ವಾರ್ಷಿಕ 2 ಕೋಟಿ ರೂಪಾಯಿ ನೀಡಲಾಗುತ್ತದೆ. ಸಂಬಳದೊಂದಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ನೀಡಲಾಗುತ್ತದೆ. ಇಷ್ಟು ಒಳ್ಳೆಯ ಸಂಬಳ ನೀಡುವ ಘೋಷಣೆ ಮಾಡಿದರೂ ಯಾರು ಈ ಕೆಲಸಕ್ಕೆ ಮುಂದಾಗುತ್ತಿಲ್ಲ. ಹಾಗಾದ್ರೆ ಯಾವುದು ಈ ಕೆಲಸ ಅಂತ ಎಂಬುದನ್ನು ನೋಡೋಣ ಬನ್ನಿ.

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಈ ಉದ್ಯೋಗಕ್ಕೆ ಆಯ್ಕೆಯಾದರೆ ಆ ಅಭ್ಯರ್ಥಿ ಚೀನಾದಲ್ಲಿ ಕೆಲಸ ಮಾಡಬೇಕು. ಚೀನಾದ ಶಾಂಘೈನ ನಿವಾಸಿಯಾಗಿರುವ ಮಹಿಳೆ ತಮ್ಮ ಪರ್ಸನಲ್ ಕೆಲಸಗಳಿಗಾಗಿ ಸೇವಕಿಯನ್ನು ಹುಡುಕುತ್ತಿದ್ದಾರೆ. ಸೇವಕಿಯಾದವಳು 24 ಗಂಟೆಯೂ  ಮಾಲಕಿಯ ಎಲ್ಲಾ ಬೇಕು-ಬೇಡಗಳನ್ನು ನೋಡಿಕೊಳ್ಳುವ ಕೆಲಸ ಮಾಡಬೇಕು. ಈ ಕೆಲಸಕ್ಕಾಗಿ ತಿಂಗಳಿಗೆ 16 ಲಕ್ಷಕ್ಕೂ ಅಧಿಕ ಸಂಬಳ ನೀಡಲು ಮಹಿಳೆ ಸಿದ್ಧವಾಗಿದ್ದಾರೆ.

ಮಹಿಳೆ ನೀಡಿದ ಜಾಹೀರಾತಿನ ಪ್ರಕಾರ, ಊಟ ಮತ್ತು ವಸತಿ ಸೇರಿದಂತೆ ವಾರ್ಷಿಕ 2 ಕೋಟಿ ರೂ.ಗೂ ಅಧಿಕ ಪ್ಯಾಕೇಜ್‌ವುಳ್ಳ ಉದ್ಯೋಗ ಇದಾಗಿದೆ. ತಿಂಗಳಿಗೆ 1,644,435.25 ರೂ. ಸಂಬಳ ನಿಗದಿ ಮಾಡಲಾಗಿದೆ. ಆದರೆ ಈ ಉದ್ಯೋಗಕ್ಕೆ ಹಾಕಿರುವ ಕೆಲ ಷರತ್ತುಗಳಿಂದ ಯಾರು ಸಹ ಅಪ್ಲೈ ಮಾಡುತ್ತಿಲ್ಲ. ಮಹಿಳಾ ಅರ್ಜಿದಾರರು 165 ಸೆಂ.ಮೀ. ಎತ್ತರ ಇರಬೇಕು ಮತ್ತು 55 ಕೆಜಿ ತೂಕ ಹೊಂದಿರಬೇಕು. ಕನಿಷ್ಠ 12ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚು ಓದಿರಬೇಕು. ನೋಡಲು ಸ್ವಚ್ಛವಾಗಿರಬೇಕು, ಹೌಸ್‌ ಕೀಪಿಂಗ್ ಸರ್ವಿಸ್‌ನ ಎಲ್ಲಾ ಕೆಲಸಗಳು ಬರುತ್ತಿರಬೇಕು. ಇಷ್ಟು ಮಾತ್ರವಲ್ಲದೇ ಗಾಯನ ಮತ್ತು ಡ್ಯಾನ್ಸ್ ಸಹ ಬರುತ್ತಿರಬೇಕು ಎಂಬ ಷರತ್ತು ವಿಧಿಸಿದ್ದಾರೆ. ಸದ್ಯ ಈ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಾಹೀರತು ನೀಡಿರುವ ಮಹಿಳೆಗೆ ಮನೆಗೆಲಸಕ್ಕೆ ಸಹಾಯಕಿ ಬೇಕಾಗಿದ್ದಾಳೆ. ಈಗಾಗಲೇ ಮಹಿಳೆ ಬಳಿ 12-12 ಗಂಟೆ ಕೆಲಸ ಮಾಡುವ ಇಬ್ಬರು ಸೇವಕಿಯರಿದ್ದಾರೆ. ಈ ಇಬ್ಬರಿಗೂ ಇದೇ ಸಂಬಳವನ್ನು ನೀಡಲಾಗುತ್ತಿದೆ. ಆದ್ರೆ ಈ ಕೆಲಸಕ್ಕೆ ಹೋಗುವವರು ಸ್ವಾಭಿಮಾನವನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕು. ಕಾರಣ ಮಾಲಕಿ ಹೇಳಿದ್ರೆ ಆಕೆಯ ಕಾಲುಗಳನ್ನು ಸಹ ಒತ್ತಬೇಕು. ಕೇಳಿದಾಗ ಮಾಲಕಿಗೆ ಹಣ್ಣು, ನೀರು ನೀಡುತ್ತಿರಬೇಕು. ಆಕೆ ಬರುವ ಮೊದಲೇ ಗೇಟ್ ಬಳಿ ನಿಂತು ಕಾಯುತ್ತಿರಬೇಕು. ಬೆರಳಿನಲ್ಲಿ ತೋರಿಸಿದ ಕೆಲಸವನ್ನು ಚಾಚೂ ತಪ್ಪದೇ ಶ್ರದ್ಧೆಯಿಂದ ಮಾಡಬೇಕು. ಇದೆಲ್ಲದರ ಜೊತೆಯಲ್ಲಿ ಯಜಮಾನಿಯ ಬಟ್ಟೆಯನ್ನು ಸಹ ಸೇವಕಿಯರೇ ಬದಲಿಸಬೇಕು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon