2ನೇ ಪ್ರಯತ್ನದಲ್ಲೇ 53ನೇ ರ್‍ಯಾಂಕ್‌ ಪಡೆದು ಐಎಎಸ್‌ ಅಧಿಕಾರಿಯಾದ ಆಶಿಶ್ ಕುಮಾರ್

ನವದೆಹಲಿ : ಡಾರ್ಜಿಲಿಂಗ್‌ ನಲ್ಲಿ ಬೆಳೆದ ಆಶಿಶ್ ಕುಮಾರ್ ನಾಗರಿಕ ಸೇವೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸಿದ್ದರು. ಆಶಿಶ್ 2017 ರಲ್ಲಿ ಅರ್ಥಶಾಸ್ತ್ರ ವಿಷಯದೊಂದಿಗೆ ಪದವಿಯನ್ನು ಪೂರ್ಣಗೊಳಿಸಿದರು. ಅದೇ ವರ್ಷ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ಪದವಿ ಮುಗಿಸಿ ಯುಪಿಎಸ್ ಸಿಗೆ ತಯಾರಿ ನಡೆಸಿದ ಆಶಿಶ್‌ ಕುಮಾರ್‌ ಸಕ್ಸ್‌ಸ್‌ ಸ್ಟೋರಿ ಇಲ್ಲಿದೆ.

ಆಶಿಶ್ ಕುಮಾರ್ ಅವರು 2018 ರಲ್ಲಿ ಮೊದಲ ಬಾರಿಗೆ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ನೀಡಿದರು. ಪ್ರಿಲಿಮ್ಸ್‌ ನಲ್ಲಿ ಅವರು ಕೇವಲ 0.33% ಅಂಕಗಳಿಂದ ಅವಕಾಶ ವಂಚಿತರಾದರು. ಇದು ಆಶಿಶ್ ಗೆ ಸ್ವಲ್ಪ ಆಘಾತವನ್ನುಂಟು ಮಾಡಿತು. ಎರಡನೇ ಬಾರಿ ಪರೀಕ್ಷೆಗೆ ತಯಾರಿ ನಡೆಸಿದರು. ಯುಪಿಎಸ್‌ ಸಿಯನ್ನು ಮೂರು ಪ್ರಯತ್ನದಲ್ಲಿ ಭೇದಿಸದಿದ್ದರೆ, ಬೇರೆ ಯಾವುದಾದರೂ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕಲು ಸಿದ್ಧಕೊಂಡಿದ್ದರು. ಆದರೆ 2ನೇ ಪ್ರಯತ್ನದಲ್ಲೇ 53ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು.

ಪರೀಕ್ಷಾ ಗೆ ಆಶಿಶ್ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಅಧ್ಯಯನ ಮಾಡಿದ್ದರು. ಹೀಗಾಗಿ ಯುಪಿಎಸ್‌ಸಿ ತೇರ್ಗಡೆಯಾಗಬಹುದು ಎಂಬುದು ಆಶಿಶ್ ಅವರ ನಂಬಿಕೆ. UPSC ತಯಾರಿಯನ್ನು ಯಾವಾಗಲೂ ಸೀಮಿತ ಪುಸ್ತಕಗಳೊಂದಿಗೆ ಮಾಡಬೇಕು. ಸಮಸ್ಯೆಯಿದ್ದರೆ, ನೀವು ಇಂಟರ್ನೆಟ್ ಸಹಾಯವನ್ನು ತೆಗೆದುಕೊಳ್ಳಬಹುದು, ಆದರೆ ನೀವು ಸಾಮಾಜಿಕ ಮಾಧ್ಯಮದಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಸಲಹೆಯನ್ನು ಅಶಿಶ್‌ ನೀಡಿದ್ದಾರೆ

Advertisement

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement