ಮುಂಬೈ: ಸಮಂತಾ ಜೊತೆಗಿನ ನಾಗಚೈತನ್ಯ ಡಿವೋರ್ಸ್ ಆಗಿ 2 ವರ್ಷಗಳು ಕಳೆದಿವೆ. ಇಬ್ಬರ ಡಿವೋರ್ಸ್ ಬಳಿಕ ನಟಿ ಶೋಭಿತಾ ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಈಗ ನಾಗಚೈತನ್ಯ ಮದುವೆ ಸುದ್ದಿ ಹೊರ ಬೀಳುತ್ತಿದ್ದಂತೆ ಶೋಭಿತಾ ಮದುಮಗಳು ಅಲ್ಲ ಎಂದು ತಿಳಿದು ಬಂದಿದೆ.
ಖ್ಯಾತ ಉದ್ಯಮಿಯೊಬ್ಬರ ಪುತ್ರಿಯನ್ನು ನಟ ಮದುವೆಯಾಗುತ್ತಿದ್ದಾರಂತೆ. ಅದಕ್ಕಾಗಿ ನಾಗಾರ್ಜುನ ದಂಪತಿ ಮದುವೆ ಓಡಾಟದಲ್ಲಿ ಬ್ಯುಸಿಯಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾಗಚೈತನ್ಯ ಮದುವೆ ಬಗ್ಗೆ ಅಕ್ಕಿನೇನಿ ಫ್ಯಾಮಿಲಿ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ನಾಗಚೈತನ್ಯ 2ನೇ ಮದುವೆಯಾಗ್ತಿರೋ ಹುಡುಗಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಮತ್ತೆ ಹೊಸ ಜೀವನ ಪ್ರಾರಂಭಿಸಲು ನಾಗಚೈತನ್ಯ ರೆಡಿಯಾಗಿದ್ದಾರೆ. ಮನೆ ಮಂದಿ ಮೆಚ್ಚಿದ ಹುಡುಗಿಯನ್ನೇ ನಟ ಮದುವೆಯಾಗ್ತಿದ್ದಾರೆ. ಯಾವಾಗ ಹಸಮಣೆ ಏರಳಿದ್ದಾರೆ ಅನ್ನುವುದು ಕಾದುನೋಡಬೇಕಿದೆ.