ಎರಡು ಲಕ್ಷದವರೆಗೂ ಸಾಲ ಮನ್ನಾ ಮಾಡಿ ಜಾರ್ಮಂಡ್ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ನೀಡಿದೆ.
ಸಿಎಂ ಹೇಮಂತ್ ಸೋರೆನ್ 1,76,977 ರೈತರ 400.66 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ.
ಇಂದು ಇದರ ಅಡಿಯಲ್ಲಿ ಸುಮಾರು 400 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಹೇಮಂತ್ ಸೋರೆನ್, ರೈತರ ವಿರುದ್ದ ಕೇಂದ್ರ ಸರ್ಕಾರ ಸಂಚು ಹೂಡಿದೆ ಎಂದು
ಆಪಾದಿಸಿದರು.