ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಡಿಸೆಂಬರ್ ಅಥವಾ ಜನವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಈ ವರ್ಷಾಂತ್ಯ ಅಥವಾ ಜನವರಿ 2024 ರ ವೇಳೆಗೆ ಪ್ರಾರಂಭವಾಗಲಿದೆ. ಆದ್ದರಿಂದ, ನೀವು ರಸ್ತೆಯಲ್ಲಿ ನಿಮ್ಮ ಐಷಾರಾಮಿ ಬಸ್‌ಗಳು ಮತ್ತು ಸ್ಲೀಪರ್ ಕೋಚ್‌ಗಳನ್ನು ಪ್ರಾರಂಭಿಸಬಹುದು. ದೇಶಾದ್ಯಂತ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದ್ದು, ಭಾರತ ಮಾಲಾ ಯೋಜನೆ ಅಡಿ ಚೆನ್ನೈ ಶೀಘ್ರದಲ್ಲೇ ದೆಹಲಿಗೆ ರಸ್ತೆ ಸಂಪರ್ಕ ಸಾಧಿಸಲಿದೆ ಎಂದು ಭರವಸೆ ನೀಡಿದ್ದಾರೆ
ಸುಮಾರು 262ಕಿಮೀ. ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಬೆಂಗಳೂರು ಕೈಗಾರಿಕಾ ಕಾರಿಡಾರ್ನ ಭಾಗವಾಗಿದೆ. ಎಕ್ಸ್‌ಪ್ರೆಸ್ ವೇ ನಿಂದ ಮುಂದೆ ಪ್ರಯಾಣದ ಅವಧಿ ಎರಡು ಗಂಟೆ ಕಡಿಮೆಯಾಗಲಿದೆ. ಸದ್ಯ ಉಭಯ ನಗರಗಳ ನಡುವಿನ ಸಂಚಾರಕ್ಕೆ ಸಾಮಾನ್ಯವಾಗಿ 5-6 ಗಂಟೆ ಬೇಕಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.