ಅಸ್ಸಾಂ: ಹಣ ಕೊಡದಿದ್ದರೆ ಎನ್‍ಕೌಂಟರ್ ಮಾಡುವುದಾಗಿ ಉದ್ಯಮಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಅಸ್ಸಾಂನಲ್ಲಿ 9 ಜನ ಪೊಲೀಸರನ್ನು ಬಂಧಿಸಲಾಗಿದೆ.
ಪೊಲೀಸರು ನನ್ನನ್ನು ಅಕ್ರಮವಾಗಿ ಬಂಧಿಸಿ 2.5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಎನ್‍ಕೌಂಟರ್‌ನಲ್ಲಿ ಕೊಲ್ಲುತ್ತೇವೆ ಎಂದು ಪೊಲೀಸರು ಬೆದರಿಸಿದ್ದಾರೆ ಎಂದು ಉದ್ಯಮಿ ರಬಿಯುಲ್ ಇಸ್ಲಾಂ ಎಂಬುವವರು ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ತಮ್ಮ ಮನೆಗೆ ಬಂದು ಏಕಾಏಕಿ ಡ್ರಗ್ಸ್ ಹಾಗೂ ಹಣದ ಬಗ್ಗೆ ಮಾತು ಶುರು ಮಾಡಿದರು. ನಂತರ ಪೊಲೀಸರು ನನ್ನ ಜೊತೆ ಇಬ್ಬರು ಸಂಬಂಧಿಕರನ್ನು ಭವಾನಿಪುರ ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ಗಂಟೆಗಳ ಕಾಲ ಹೊಡೆದಿದ್ದಾರೆ
ಇನ್ನು ಬಳಿಕ ಠಾಣೆಯಲ್ಲಿ ಹಲವಾರು ಗಂಟೆಗಳ ಕಾಲ ಬಂಧಿಸಲಾಯಿತು. ಮರುದಿನ ಎಸ್‍ಪಿ ಅವರ ನಿವಾಸಕ್ಕೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಿದರು ಎಂದು ಉದ್ಯಮಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.