ನವದೆಹಲಿ: ನವೆಂಬರ್ ಅಂತ್ಯದ ವೇಳೆಗೆ 97.26%ದಷ್ಟು ರೂ. 2000 ಮುಖಬೆಲೆಯ ನೋಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಹೇಳಿದೆ. ಈ ವರ್ಷ ಮೇ19 ರವರೆಗೆ ಚಲಾವಣೆಯಲ್ಲಿದ್ದ 2,000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿಯೇ ಮುಂದುವರಿಯುತ್ತವೆ ಎಂದು ಆರ್‌ಬಿಐ ತಿಳಿಸಿದೆ.
2,000 ಮುಖಬೆಲೆಯ ಬ್ಯಾಂಕ್ ನೋಟಿನ ಚಲಾವಣೆ ಪ್ರಮಾಣ ಮೇ ತಿಂಗಳಲ್ಲಿ 3.56 ಲಕ್ಷ ಕೋಟಿ ರೂ.ಗಳಷ್ಟಿದ್ದು ನವೆಂಬರ್ ಅಂತ್ಯಕ್ಕೆ 9,760 ಕೋಟಿ ರೂ.ಗೆ ಇಳಿಕೆಯಾಗಿದೆ ಅಂದರೆ ಸುಮಾರು 2.7 ಪ್ರತಿಶತವು ಇನ್ನೂ ಚಲಾವಣೆಯಲ್ಲಿದೆ ಎಂದು ತಿಳಿಸಿದೆ.
ರಿಸರ್ವ್ ಬ್ಯಾಂಕ್ ಈ ವರ್ಷದ ಮೇ 19ರಂದು ರೂ 2000 ನೋಟುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು ಮತ್ತು ಎಲ್ಲಾ ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಲು ಸೆಪ್ಟೆಂಬರ್ 30 ರ ಗಡುವನ್ನು ನೀಡಿತ್ತು. ಇದಾದ ಬಳಿಕ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ನೋಟುಗಳನ್ನು ಠೇವಣಿ ಇಡುವ ಅಥವಾ ಬದಲಾಯಿಸುವ ಈ ಸೌಲಭ್ಯವನ್ನು ಅಕ್ಟೋಬರ್ 7ರವರೆಗೆ ವಿಸ್ತರಿಸಿತ್ತು.
ಅಕ್ಟೋಬರ್ 9 ರಿಂದ, ಜನರು ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಕ್ರೆಡಿಟ್ ಮಾಡಲು ಯಾವುದೇ ಪೋಸ್ಟ್ ಆಫೀಸ್‌ನಿಂದ, ಅಥವಾ RBI ಇಶ್ಯೂ ಆಫೀಸ್‌ಗಳ ಮೂಲಕ ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅನುಮತಿಸಿದೆ.