ನವದೆಹಲಿ:2022ರಲ್ಲಿ ದೇಶಾದ್ಯಂತ ಸಂಭವಿಸಿದ ರೇಬಿಸ್ ಸೋಂಕಿನಿಂದಾದ ಮರಣ ಪ್ರಮಾಣದಲ್ಲಿ ಕರ್ನಾಟಕ ರಾಜ್ಯಗಳು ಮೂರನೆ ಸ್ಥಾನದಲ್ಲಿವೆ.
ಜುಲೈ 21ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಬಘೇಲ್ , ಕೇರಳ ಸಂಸದ ಡೀನ್ ಕುರಿಯಾಕೋಸ್ ಅವರ ಪ್ರಶ್ನೆಗೆ ಪ್ರತಿಯಾಗಿ ಲೋಕಸಭೆಯಲ್ಲಿ ಮಂಡಿಸಿದರು.
ವರದಿಯ ಪ್ರಕಾರ, ದಕ್ಷಿಣ ಭಾರತದ ಐದು ರಾಜ್ಯಗಳು ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣ ಪ್ರಮಾಣವನ್ನು ದಾಖಲಿಸಿವೆ. ಇಡೀ ಭಾರತದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಮೂರನೆ ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣಗಳನ್ನು ದಾಖಲಿಸಿದ್ದರೆ, ಕೇರಳ 27 ಮರಣಗಳೊಂದಿಗೆ ನಾಲ್ಕನೆಯ ಸ್ಥಾನದಲ್ಲಿ, ತೆಲಂಗಾಣ 21 ಮರಣಗಳೊಂದಿಗೆ ಐದನೆಯ ಸ್ಥಾನದಲ್ಲಿ ಹಾಗೂ ತಮಿಳುನಾಡು 20 ಮರಣಗಳೊಂದಿಗೆ ಆರನೆಯ ಸ್ಥಾನದಲ್ಲಿದೆ ಎಂದು ವರದಿ ಮಾಡಿದೆ.
ಇಡೀ ದೇಶದಲ್ಲಿ ರೇಬಿಸ್ ಸೋಂಕಿನಿಂದ ಸಂಭವಿಸಿರುವ ಮರಣಗಳಲ್ಲಿ ದಿಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿ 48 ಮರಣಗಳು ಸಂಭವಿಸಿವೆ. ನಂತರ, ಕ್ರಮವಾಗಿ ಪಶ್ಚಿಮ ಬಂಗಾಳ (38), ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ (ತಲಾ 29), ಕೇರಳ (27), ತಮಿಳುನಾಡು (27), ಬಿಹಾರ ಮತ್ತು ತೆಲಂಗಾಣ (ತಲಾ 21), ತಮಿಳುನಾಡು (16) ಹಾಗೂ ಅಸ್ಸಾಂ (12) ರಾಜ್ಯಗಳಿವೆ. ಉಳಿದಂತೆ ಇನ್ನಿತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 10ಕ್ಕಿಂತಲೂ ಕಡಿಮೆ ಪ್ರಮಾಣದ ಮರಣ ಸಂಖ್ಯೆಯನ್ನು ದಾಖಲಿಸಿವೆ ಎಂದು ತಿಳಿಸಿದೆ. 2022ರಲ್ಲಿ ರೇಬಿಸ್ ಸೋಂಕಿನಿಂದಾಗಿರುವ ಮರಣಗಳ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಾವಾರು ದತ್ತಾಂಶಗಳನ್ನೂ ಸಚಿವರು ಒದಗಿಸಿದರು.