ಮಾಸ್ಕೋ: ರಷ್ಯಾ ಅಧ್ಯಕ್ಷೀಯ ಚುನಾವಣೆ ಮುಂದಿನ ವರ್ಷದ ಮಾ. 17ಕ್ಕೆ ನಡೆಯಲಿದೆ. ಈ ಬಗ್ಗೆ ಅಲ್ಲಿನ ಸರಕಾರ ಸಿದ್ಧತೆಗಳನ್ನು ನಡೆಸಲು ಆರಂಭಿಸಲಾಗಿದೆ ಎಂಬ ಮಾಹಿತಿ ದೊರಕಿದೆ.
ಪುಟಿನ್ ಈಗಾಗಲೇ ಬರೋಬ್ಬರಿ 4 ಬಾರಿ ಅಧ್ಯಕ್ಷೀಯ ಚುನಾವಣೆ ಗೆದ್ದಿದ್ದಾರೆ. ಅಲ್ಲದೆ ಈ ಅಧಿಕಾರ ಅಸ್ತ್ರವನ್ನು 2030ರ ತನಕ ಮುಂದುವರಿಸಿಕೊಂಡು ಹೋಗಲು ಪುಟಿನ್ ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಪುತಿನ್ ಅಧಿಕೃತವಾಗಿ ಎಲ್ಲಿಯೂ ಘೋಷಣೆ ಮಾಡಿಲ್ಲ.
ರಷ್ಯಾ ಸಂವಿಧಾನಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿಯ ಪ್ರಕಾರ, ಪುತಿನ್ ಅವರಿಗೆ ಹಾಲಿ ಅವಧಿ ಮುಕ್ತಾಯದ ಬಳಿಕ ಇನ್ನೂ ಎರಡು ಬಾರಿ ಆರು ವರ್ಷಗಳ ಅವಧಿಗೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಡುತ್ತದೆ.