ಚಿತ್ರದುರ್ಗ : ದಾಸ್ ಸ್ಪೋಟ್ರ್ಸ್ ಅಕಾಡೆಮಿ, ರೈಡರ್ಸ್ ಟೇಕ್ವಾಂಡೋ ಅಕಾಡೆಮಿ ವತಿಯಿಂದ ಹೊಸದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಮೂರನೆ ಸಾಯಿ ಕಪ್ ಮುಕ್ತ ಟೇಕ್ವಾಂಡೋ ಪಂದ್ಯದಲ್ಲಿ ಹದಿನೆಂಟು ಮಕ್ಕಳು ಭಾಗವಹಿಸಿದ್ದು, 21 ಚಿನ್ನದ ಪದಕ, 7 ಬೆಳ್ಳಿ ಪದಕ, 8 ಕಂಚಿನ ಪದಕಗಳನ್ನು ಪಡೆದು ಟೇಕ್ವಾಂಡೋ ಅಕಾಡೆಮಿಗೆ ಕೀರ್ತಿ ತಂದಿದ್ದಾರೆ.
ವಿಶೇಷವಾಗಿ ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ನೆರವಾಗಲಿರುವ ಟೇಕ್ವಾಂಡೋ ಸ್ಪರ್ಧೆಯಲ್ಲಿ ಎಲ್.ಕೆ.ಜಿ.ಯಿಂದ ಹಿಡಿದು ಪದವೀಧರರು ಭಾಗವಹಿಸಿದ್ದು, ಸ್ಪೋಟ್ರ್ಸ್ ಕೋಟಾದಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗಲಿದೆ ಎಂದು ಅಂತರಾಷ್ಟ್ರೀಯ ತೀರ್ಪುಗಾರರು ಹಾಗೂ ತರಬೇತುದಾರರಾದ ಸಿ.ಆರ್.ಕನಕದಾಸ್ ತಿಳಿಸಿದರು. ಟೇಕ್ವಾಂಡೋ ಮಾಸ್ಟರ್ಗಳಾದ ಇಸ್ಮಾಯಿಲ್, ಶಫಿವುಲ್ಲಾ ಇವರುಗಳು ಚಿತ್ರದಲ್ಲಿದ್ದಾರೆ.