ಹೈದರಾಬಾದ್: ನಟ – ನಿರ್ಮಾಪಕ ಕ್ರಿಶನ್ ಕುಮಾರ್ ಪುತ್ರಿ ಮತ್ತು ಟಿ-ಸೀರಿಸ್ನ ಸಹ-ಮಾಲೀಕರಾದ ತಿಶಾ ಕುಮಾರ್ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. ಬಹು ಸಮಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ತಿಶಾ ಜುಲೈ 18, ಗುರುವಾರ ನಿಧನರಾಗಿದ್ದಾರೆ. ಕುಮಾರ್ ಕುಟುಂಬದ ಮೂಲಗಳು ಮಾಧ್ಯಮಗಳಿಗೆ ತಿಶಾ ಕುಮಾರ್ ಮರಣವನ್ನು ದೃಢಪಡಿಸಿದ್ದಾರೆ. ಕ್ಯಾನ್ಸರ್ ಹಿನ್ನೆಲೆ ತಿಶಾ ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ಹಂಚಿಕೊಂಡಿವೆ.
