ರಾಜ್ಯದಲ್ಲಿ ಅಕ್ರಮ ಪಡಿತರ -ವಿತರಣೆಗೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ಈವರೆಗೆ 213 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿ 238 ಆರೋಪಿಗಳನ್ನು ಬಂಧಿಸಲಾಗಿದೆ. ಮಾತ್ರವಲ್ಲದೆ, ಇಂತಹ ಪ್ರಕರಣಗಳ ಕುರಿತಂತೆ ಪರಿಶೀಲಿಸಿ ಮೇಲ್ವಿ ಚಾರಣೆಗಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ನೋಡಲ್ ಅಧಿಕಾರಿಗಳನ್ನು ವಿಭಾಗ ವಾರು ನೇಮಕ ಮಾಡಲಾಗಿದೆ.
ಸಾರ್ವಜನಿಕ ವಿತರಣಾ ಪದ್ದತಿ ಯಡಿ ಪಡಿತರ ವಿತರಣೆಯಲ್ಲಿ ಅಕ್ರಮ ಕಂಡು ಬಂದಾಗ ದಾಳಿ ನಡೆಸಿ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಪ್ರಕರಣ ದಾಖಲಿಸಿ ಅಕ್ರಮ ಪಡಿತರ ದಾಸ್ತಾನು ಮುಟ್ಟು ಗೋಲು ಹಾಕಿ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಬಳಿಕ ಮುಟ್ಟುಗೋಲು ಹಾಕಲಾದ ದಾಸ್ತಾನನ್ನು ವಿಲೇವಾರಿ ಮಾಡಿ ಪಡಿತರ ಮೊತ್ತವನ್ನು ಸರಕಾರಕ್ಕೆ ಜಮೆ ಮಾಡಲಾಗುತ್ತದೆ. ಅದರಂತೆ ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ಈವರೆಗೆ ದಾಖಲಾದ 213 ಎಫ್‌ಐಆರ್ ಗಳಲ್ಲಿ 2,68,07,872 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯ ಸರಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 2021ರ ಜನವರಿಯಿಂದ ಮೇ 2023 ರವರೆಗೆ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ. ಇವರಿಂದ 13,51,30,858 ರೂ. ದಂಡ ವಸೂಲು ಮಾಡಲಾಗಿದೆ. ರಾಜ್ಯದಲ್ಲಿ (2024ರ ಡಿ.8ರವರೆಗೆ) ಅಂತ್ಯೋದಯದಡಿ 10,80,648 ಪಡಿತರ ಚೀಟಿಗಳಿದ್ದು, ಆದ್ಯತಾ ವಲಯದಡಿ 4. 1,17,58,582 ಪಡಿತರ ಚೀಟಿಗಳಿವೆ. ಒಟ್ಟು 1,28,39,230 ಪಡಿತರ ಚೀಟಿ ಗಳಲ್ಲಿ ಫಲಾನುಭವಿಗಳ ಸಂಖ್ಯೆ 4,42,56,124 ಎಂದು ಗುರುತಿಸಲಾಗಿದೆ.
ಆಹಾರ, ನಾಗರಿಕ ಸರಬರಾಜು ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 2023ರ ಸೆಪ್ಟೆಂಬರ್ 29ರಲ್ಲಿ 2,95,986 ಬಿಪಿಎಲ್ ಕಾರ್ಡ್‌ಗಳ ವಿಲೇವಾರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಆದೇಶಿಸಿದೆ. ಇದರಲ್ಲಿ ಅರ್ಹ 2,34,631 ಅರ್ಜಿಗಳ ಪೈಕಿ 1,69,630 ಅರ್ಜಿಗಳನ್ನು ಅನುಮೋದಿಸಲಾ ಗಿದ್ದು, 59,528 ಅರ್ಜಿಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ. ಆಹಾರ ಇಲಾಖೆಯಲ್ಲಿ ಬಳಸಲಾಗುತ್ತಿರುವ ಸರ್ವರ್ ಹಳೆಯದಾಗಿರುವ ಕಾರಣ ಎನ್ ಐಸಿಯಿಂದ ಕೆಎಸ್‌ಡಿಸಿ(ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್)ಗೆ ಆಹಾರ ತಂತ್ರಾಂಶದ ವರ್ಗಾವಣೆ ಕಾರ್ಯ ಅಂತಿಮ ಹಂತದಲ್ಲಿದೆ.
ಎನ್‌ಐಸಿಯಿಂದ ಕೆಎಸ್‌ಡಿಸಿಗೆ ವರ್ಗಾವಣೆ ಕಾರ್ಯ ಪೂರ್ಣಗೊಂಡ ನಂತರ ಆದ್ಯತಾ ಪಡಿತರ ಚೀಟಿ ನೀಡುವ ಕಾರ್ಯ ಹಾಗೂ ತಿದ್ದುಪಡಿ ಮಾಡುವ ಪ್ರಕ್ರಿಯೆ ನಿರಂತರವಾಗಲಿದೆ ಎಂದು ಇಲಾಖೆಯು ತಿಳಿಸಿದೆ. ರಾಜ್ಯದಲ್ಲಿ ಅಕ್ರಮ ಪಡಿತರದ ಕುರಿತಂತೆ ಸರಕಾರ ಕೈಗೊಂಡಿರುವ ಕಾರ್ಯಗಳ ಕುರಿತಂತೆ ವಿಧಾನ ಪರಿಷತ್‌ನ ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆಯು ಈ ಮೇಲಿನ ಮಾಹಿತಿ ಒದಗಿಸಿದೆ.