ಮುಂಬೈ: 2023ರ ಆರ್ಥಿಕ ವರ್ಷದಲ್ಲಿ ದೇಶದ 33 ನವೋದ್ಯಮಗಳು ಸುಮಾರು 22 ಸಾವಿರ ಕೋಟಿ ನಷ್ಟ ಅನುಭವಿಸಿವೆ ಎಂದು ವರದಿಯಾಗಿದೆ. ಇತ್ತೀಚೆಗೆ ಭಾರತದ 55 ನವೋದ್ಯಮಗಳು ತಾವು ಅನುಭವಿಸಿದ ನಷ್ಟದ ಕುರಿತು ಲೆಕ್ಕಾಚಾರದ ಮಾಹಿತಿ ನೀಡಿವೆ. ಅದರಲ್ಲಿ 33 ನವೋದ್ಯಮಗಳು ಸಾವಿರಾರು ಕೋಟಿ ನಷ್ಟ ಅನುಭವಿಸಿವೆ. ಇದರಲ್ಲಿ ನೌಕ್ರಿ ಡಾಟ್ ಕಾಮ್, ಕ್ರೆಡ್ (CRED), ಝೊಮ್ಯಾಟೊ, ಫ್ಲಿಪ್‌ಕಾರ್ಟ್ ಇಂಡಿಯಾ, ಪೇಟಿಎಮ್, ಸೇರಿದಂತೆ ಇನ್ನೂ ಹಲವು ಸ್ಟಾರ್ಟ್‌ಅಪ್‌ಗಳು ನಷ್ಟ ಎದುರಿಸಿವೆ. ಈ ನಷ್ಟದಿಂದ ಚೇತರಿಸಿಕೊಳ್ಳಲು ನಮಗೆ 2024ರ ಆರ್ಥಿಕ ವರ್ಷದಲ್ಲಿ ಇನ್ನೂ ಆರು ತಿಂಗಳು ಕಾಲಾವಕಾಶ ಇದೆ ಎಂದು ಈ ಸ್ಟಾರ್ಟ್‌ಅಪ್‌ಗಳು ಹೇಳಿವೆ. ಇದರೊಂದಿಗೆ ಬಹತೇಕ ನವೋದ್ಯಮ ಕಂಪನಿಗಳು ತಮ್ಮ 2023ರ ಆರ್ಥಿಕ ವರ್ಷದ ಆಯವ್ಯಯ ಲೆಕ್ಕವನ್ನು ಬಹಿರಂಗಪಡಿಸಿಲ್ಲ.