ದೇವನಹಳ್ಳಿ: 7 ತಿಂಗಳ ಗರ್ಭಿಣಿಯೊಬ್ಬರು ಸತತ 23 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ರೆಕಾರ್ಡ್ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಆವಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ 13 ವರ್ಷದಿಂದ ಆವಲಹಳ್ಳಿಯ ಕಲಾವಿದೆ ಸುಬ್ಬಲಕ್ಷ್ಮೀ ಅವರು ಸ್ಯಾಕ್ಸೋಪೋನ್ ನುಡಿಸುತ್ತಿದ್ದು, ಕನ್ನಡ, ತೆಲುಗು, ಇಂಗ್ಲೀಷ್ ಹಿಂದಿ ಭಾಷೆಗಳ ಗೀತೆಗಳನ್ನು ಸ್ಯಾಕ್ಸೋಪೋನ್ನಲ್ಲಿ ನಡಿಸುತ್ತಿದ್ದಾರೆ.
ಇನ್ನು ಸುಬ್ಬಲಕ್ಷ್ಮೀ ಏಳು ತಿಂಗಳು ಗರ್ಭಿಣಿ ಇದ್ದು, ಇವರು ಭಾನುವಾರ ದಿನಪೂರ್ತಿ ಬ್ರೆಕ್ ಇಲ್ಲದೆ 23 ಗಂಟೆಗಳ ಕಾಲ ಸ್ಯಾಕ್ಸೋಪೋನ್ ನುಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಸುಬ್ಬಲಕ್ಷ್ಮೀ ಅವರ ಸಾಧನೆ ವರ್ಲ್ಡ್ ಗಿನ್ನಿಸ್ ರೆಕಾರ್ಡ್ ಬುಕ್ನಲ್ಲಿ ದಾಖಲಾಗಿದೆ.