24  ರಂದು ಸಾಣೇಹಳ್ಳಿ ಶ್ರೀಮಠದಲಿ ದೊಡ್ಡಗುರುಗಳ ಸ್ಮರಣೆ

 

ಚಿತ್ರದುರ್ಗ: ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ 20ನೆಯ ತರಳಬಾಳು ಜಗದ್ಗುರು ಶ್ರೀ 1108 ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು 40 ವರ್ಷಗಳ ಕಾಲ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕöÈತಿಕ ಕ್ಷೇತ್ರದಲ್ಲಿ  ಹೊಸ ಮನ್ವಂತರವನ್ನೇ ಸೃಷ್ಠಿಸಿದ ಮಹಾಗುರು. ಇಂತಹ  ಗುರುಗಳ ಸ್ಮರಣೆಯನ್ನು 24  ರಂದು ಸಾಣೇಹಳ್ಳಿ ಶ್ರೀಮಠದಲ್ಲಿ ನಡೆಯಲಿದೆ.

ಬೆಳಗ್ಗೆ 8 ಗಂಟೆಗೆ ಶಿವಮಂತ್ರ ಲೇಖನ, ಶಿವಧ್ವಜಾರೋಹಣ ನಡೆಯಲಿದೆ.  ಸಂಜೆ 5 ಗಂಟೆಗೆ ವೇದಿಕೆಯ ಕಾರ್ಯಕ್ರಮ ನಂತರ ಮಹಾಬೆಳಗು ನಾಟಕ ಪ್ರದರ್ಶನ ಸಾಣೇಹಳ್ಳಿಯಲ್ಲಿ ನಡೆಯಲಿದೆ.

Advertisement

24ರ ಬೆಳಗ್ಗೆ ಮಾಡೋಣವೆಂದು ಹಿಂದಿನ ವರ್ಷವೇ ಪೂಜ್ಯರು ಹೇಳಿದ್ದರು. ಬಂದು ಹೋಗುವವರಿಗೆ ಸಂಜೆ ತೊಂದರೆಯಾಗುತ್ತದೆ. ಆದುದರಿಂದ ಬೆಳಗ್ಗೆ ಮಾಡಬೇಕು ಎಂದು ಶ್ರೀಮಠದಲ್ಲಿ ಸೇರಿದ್ದ ಭಕ್ತರ ಸಭೆಯಲ್ಲಿ ಚರ್ಚೆ ನಡೆಯಿತು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಆಶೀರ್ವಚನದಲ್ಲಿ ಮುಂದಿನ ವರ್ಷದಿಂದ ನಿಮ್ಮೆಲ್ಲರ ಅಭಿಪ್ರಾಯದಂತೆ ಬೆಳಗ್ಗೆ 11 ಗಂಟೆಗೆ ಮಾಡೋಣ. ಈ ವರ್ಷ ಬೇಡ ಎಂದು ಆದೇಶ ಮಾಡಿದರು.

ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಎಸ್ ಸಿದ್ದಪ್ಪ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ ಸಿ ಚಂದ್ರಪ್ಪ, ಕಲಾಸಂಘದ ಕಾರ್ಯದರ್ಶಿ ಎಸ್ ಕೆ ಪರಮೇಶ್ವರಯ್ಯ, ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ, ಜಾನಕಲ್ ತಿಮ್ಮಜ್ಜ, ಬನ್ಸಿಹಳ್ಳಿ ಅಜ್ಜಪ್ಪ, ರಾಮೇಗೌಡ, ಸಿದ್ದಯ್ಯ, ಎಸ್ ಆರ್ ಚಂದ್ರಶೇಖರಯ್ಯ, ದೃವಕುಮಾರ್, ಕೃಷ್ಣಪ್ಪ, ಗಂಗಾಧರಪ್ಪ, ಮಹೇಶ್ವರಪ್ಪ, ಪ್ರಕಾಶ್ ದಕ್ಷಿಣಮೂರ್ತಿ, ರವಿಕುಮಾರ, ಸಾಣೇಹಳ್ಳಿ ಗ್ರಾಮಸ್ಥರು, ಉಭಯ ಶಾಲೆಯ ಮುಖ್ಯಸ್ಥರು, ಸುತ್ತಮುತ್ತ ಗ್ರಾಮಸ್ಥರು ಭಾಗವಹಿಸಿದ್ದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement