ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಗೃಹರಕ್ಷಕ ಮತ್ತು ಗೃಹರಕ್ಷಕಿ ಸ್ವಯಂ ಸೇವಕ ಸದಸ್ಯರ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೇಮಕಾತಿಯ ವಿವರ ಹೀಗಿದೆ:
ಒಟ್ಟು 247 ಹುದ್ದೆಗಳು
ಹುದ್ದೆಯ ಹೆಸರು: ಗೃಹರಕ್ಷಕ ಮತ್ತು ಗೃಹರಕ್ಷಕಿ
ನೇಮಕಾತಿ ಇಲಾಖೆ: ಚಿಕ್ಕಮಗಳೂರು, ಜಿಲ್ಲಾ ಗೃಹರಕ್ಷಕ ದಳ
ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?
(1) ಅರ್ಜಿದಾರರ ವಯಸ್ಸು ಕನಿಷ್ಥ 19 -50 ವರ್ಷದ ಒಳಗಿರಬೇಕು.
(2) ಅಭ್ಯರ್ಥಿ 10ನೇ ತರಗತಿ ಉತ್ತೀರ್ಣರಾಗಿರಬೇಕು.
(3) ಗೃಹರಕ್ಷಕ ಸದಸ್ಯರಾಗ ಬಯಸುವವರು ತಮ್ಮ ವಾಸ ಸ್ಥಳದಿಂದ ತಾವು ಸೇರ ಬಯಸುವ ಘಟಕಕ್ಕೆ 6 Km ವ್ಯಾಪ್ತಿಯ ಒಳಗಿರಬೇಕಾಗುತ್ತದೆ.
(4) ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರಬಾರದು.
(5) ದೃಡಕಾಯವಾಗಿದ್ದು ಆರೋಗ್ಯವಂತರಾಗಿರಬೇಕು.
(6) ಯಾವುದೇ ರಾಜಕೀಯ ಪಕ್ಷದ ಸದಸ್ಯರು ಆಗಿರಬಾರದು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
- ಅರ್ಜಿದಾರರ ಆಧಾರ್ ಕಾರ್ಡ ( aadhar card)
- ವಿದ್ಯಾರ್ಹತೆ ಪ್ರಮಾಣ ಪತ್ರ/ಅಂಕಪಟ್ಟಿ. marks card
- ಜನ್ಮ ದಿನಾಂಕದ ದೃಡೀಕರಣ(birth certificate)
- ವೈದ್ಯಕೀಯ ಪ್ರಮಾಣ ಪತ್ರ (Medical certificate)
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಪೋಟೋ( photo)
ಎಲ್ಲಿ ಅರ್ಜಿ ಸಲ್ಲಿಸಬೇಕು?
ಮೇಲಿ ತಿಳಿಸಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ದಿನಾಂಕ: 31 ಜ. 2024 ರ ಒಳಗಾಗಿ ನಿಮ್ಮ ವ್ಯಾಪ್ತಿಯ ಗೃಹರಕ್ಷಕ ಘಟಕಾಧಿಕಾರಿ ಕಚೇರಿಗೆ, ಗೃಹರಕ್ಷಕ ದಳ ಕಚೇರಿಯನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹುದ್ದೆಗೆ ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಬಳಿಕ ದಾಖಲಾತಿಗಳನ್ನು ಪರೀಶಿಲಿಸಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2024
ಹೆಚ್ಚಿನ ಮಾಹಿತಿ:
ಜಿಲ್ಲಾ ಗೃಹರಕ್ಷಕ ದಳದ ಕಚೇರಿ, ಅಗ್ನಿಶಾಮಕ ಇಲಾಖೆಯ ಪಕ್ಕ, ಕೆ ಎಂ ರಸ್ತೆ ಚಿಕ್ಕಮಗಳೂರು ಸಹಾಯಕ ಬೋಧಕರಾದ ಶ್ರೀ ಕರಿಬಸಪ್ಪ ಎಂ , ಮೊ 8151914734 ಮತ್ತು ಕಚೇರಿ ಸಂಖ್ಯೆ: 9164283747 ಗೆ ಸಂಪರ್ಕ ಮಾಡಿ.