ರಾಯ್ಪುರ : ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಉಕ್ಕಿನ ಸ್ಥಾವರದ ಸಂಗ್ರಹಣ ಘಟಕ ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, 25 ಜನ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮುಂಗೇಲಿಯ ಸರಗಾಂವ್ ಪ್ರದೇಶದಲ್ಲಿರುವ ಕುಸುಸ್ಮ್ ಸ್ಟೀಲ್ ಸ್ಥಾವರದಲ್ಲಿ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಬೃಹತ್ ವಸ್ತುಗಳನ್ನು ಸಂಗ್ರಹಿಸಲು ಬಳಸುವ ಎತ್ತರದ ಸಿಲಿಂಡರಾಕಾರದ ಕಬ್ಬಿಣದ ಸಂಗ್ರಣ ಘಟಕ ಕುಸಿದಿದೆ. ಈ ವೇಳೆ ಸ್ಥಳದಲ್ಲಿದ್ದ ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಅಲ್ಲದೇ 25 ಮಂದಿ ಘಟಕದ ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಅವಶೇಷಗಳ ಅಡಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.