ಉತ್ತರ ಪ್ರದೇಶ: ಪಾಸ್ ಪೋರ್ಟ್ ಪರಿಶೀಲನೆಗೆ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯೊಬ್ಬರ ತಲೆಗೆ ಪೊಲೀಸ್ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಗುಂಡು ಹಾರಿಸಿದ ಘಟನೆ ನಡೆದಿದ್ದು, ಮಹಿಳೆ ಗಂಭೀರವಾಗಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.ಮಹಿಳೆಯನ್ನು ಇಶ್ರತ್ ಎಂದು ಗುರುತಿಸಲಾಗಿದ್ದು, ಇವರು ತನ್ನ ಸಂಬಂಧಿಯೊಂದಿಗೆ ಪೊಲೀಸ್ ಠಾಣೆಗೆ ಪಾಸ್ ಪೋರ್ಟ್ ವೇರಿಫಿಕೇಶನ್ ಗೆ ಬಂದಿದ್ದಾರೆ. ಈ ವೇಳೆ ಒಬ್ಬ ಪೊಲೀಸ್ ಅಧಿಕಾರಿ ಬಂದು ಎಸ್‌ಐ ಮನೋಜ್ ಶರ್ಮಾಗೆ ಪಿಸ್ತೂಲ್ ನೀಡಿದರು. ಎಸ್‌ಐ ಪಿಸ್ತೂಲ್ ಕ್ಲೀನ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಮಹಿಳೆಯ ಮೇಲೆ ತಗುಲಿ ಮಹಿಳೆ ನೆಲಕ್ಕೆ ಬಿದ್ದಿದ್ದಾಳೆ. ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಜೆಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡು ಇಶ್ರತ್ ಅವರ ತಲೆಯ ಹಿಂಭಾಗಕ್ಕೆ ತಗುಲಿದ್ದು, ತಕ್ಷಣವೇ ಜಾರಿಗೆ ಬರುವಂತೆ ಎಸ್‌ಐ ಅನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ನೈಥಾನಿ ಹೇಳಿದರು. ಕರ್ತವ್ಯಲೋಪ ಎಸಗಿದ ಎಸ್‌ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತ ತಲೆಮರೆಸಿಕೊಂಡಿರುವುದರಿಂದ ಪೊಲೀಸ್ ಇನ್‌ಸ್ಪೆಕ್ಟರ್‌ನನ್ನು ಬಂಧಿಸಲು ತಂಡವನ್ನು ನಿಯೋಜಿಸಿದ್ದೇವೆ ಎಂದು ನೈತಾನಿ ತಿಳಿಸಿದ್ದಾರೆ.