ವಾಷಿಂಗ್ಟನ್: ಅಮೆರಿಕದ ಮಿಚಿಗನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಗ್ರಾಹಕರೊಬ್ಬರು 32.43 ಡಾಲರ್ (ಸುಮಾರು 2,600 ರೂಪಾಯಿ) ಬಿಲ್‌ಗೆ 10,000 ಡಾಲರ್ (ಸುಮಾರು 8.3 ಲಕ್ಷ ರೂಪಾಯಿ) ಟಿಪ್ಸ್ ನೀಡಿದ್ದಾರೆ. ರೆಸ್ಟೋರೆಂಟ್ ಬಿಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋ ಭಾರಿ ವೈರಲ್ ಆಗಿದೆ. “ಈ ಜೀವನವನ್ನು ಬದಲಾಯಿಸುವ ಕಾರ್ಯವನ್ನು ಮಾಡಿದ ಗ್ರಾಹಕರಿಗೆ ಧನ್ಯವಾದ ಹೇಳಲು ನಾವು ಬಯಸಿದ್ದೇವೆ” ಎಂದು ರೆಸ್ಟೋರೆಂಟ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಬಿಲ್ ಫೋಟೋ ಹಂಚಿಕೊಂಡು ಬರೆದುಕೊಂಡಿದೆ.
