ದೆಹಲಿ: ಕೇಂದ್ರ ಸಶಸ್ತ್ರ ಮೀಸಲು ಪಡೆಗಳಲ್ಲಿ ಖಾಲಿ ಇರುವ 26,146 ಕಾನ್ಸ್ಟೆಬಲ್ (GD) ಹುದ್ದೆಗಳ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಿ ಆದೇಶಿಸಿದೆ.
ಕನ್ನಡದಲ್ಲಿ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಇದು ಭರ್ಜರಿ ಸಿಹಿ ಸುದ್ದಿಯಾಗಿದೆ. SSC ನಡೆಸುವ ಈ ಪರೀಕ್ಷೆಗಳು ಫೆಬ್ರವರಿ 20 ರಿಂದ ಮಾರ್ಚ್ 7 ರವರೆಗೆ ನಡೆಯಲಿವೆ. ಈ ಪರೀಕ್ಷೆಗೆ ದೇಶದ 128 ನಗರಗಳಲ್ಲಿ ಒಟ್ಟು 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ.!
 
				 
         
         
         
															 
                     
                     
                     
                     
                    


































 
    
    
        