27ವರ್ಷದ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವು

WhatsApp
Telegram
Facebook
Twitter
LinkedIn

ಭುವನೇಶ್ವರ : ಜನಪ್ರಿಯ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಅವರು ಭುವನೇಶ್ವರದ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

27 ವರ್ಷದ ರುಕ್ಸಾನಾ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಗೆ ಚಿಕಿತ್ಸೆಗೆ ಒಳಗಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಅಲ್ಲದೇ ನಿರಂತರ ಬೆದರಿಕೆಗಳು ಬರುತ್ತಿದ್ದವು, ಜೊತೆಗೆ ತನ್ನ ಪ್ರತಿಸ್ಪರ್ಧಿ ಗಾಯಕನಿಂದಾಗಿ ವಿಷ ಸೇವಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಸುಮಾರು 15 ದಿನಗಳ ಹಿಂದೆ ರುಕ್ಸಾನಾ ಅವರು ಬೋಲಂಗಿರ್‌ನಲ್ಲು ಶೂಟಿಂಗ್‌ ಮಾಡುತ್ತಿದ್ದರು. ಈ ವೇಳೆ ಅವರು ಜ್ಯೂಸ್‌ ಕುಡಿದರು. ಜ್ಯೂಸ್‌ ಕುಡಿದ ಕೆಲವೇ ಕ್ಷಣಗಳಲ್ಲಿ ಅಸ್ವಸ್ಥರಾಗಿದ್ದರು, ನಂತರ ಅವರನ್ನು ಭವಾನಿಪಟ್ಟಣದಲ್ಲಿರುವ ಭೀಮಾ ಭೋಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಬಾರ್‌ಗಢ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಆಕೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಕಾರಣ ಭುವನೇಶ್ವರದ ಏಮ್ಸ್‌ಗೆ ಕರೆತರಲಾಯಿತು ಎಂದು ಆಕೆಯ ಸಹೋದರಿ ರೂಬಿ ಬಾನೊ ತಿಳಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

BC Suddi   About Us
For Feedback - [email protected]

Related News

LATEST Post

WhatsApp Icon Telegram Icon