ಬರೋಬ್ಬರಿ 27 ವರ್ಷಗಳ ನಂತರ ನಟ, ನಿರ್ದೇಶಕ ಪ್ರಭುದೇವ್ ಮತ್ತು ಬಾಲಿವುಡ್ ನಟಿ ಕಾಜೋಲ್ ಜೊತೆಯಾಗಿ ನಟಿಸಿದ್ದಾರೆ. ಹೌದು ತೆಲುಗಿನ ನಿರ್ದೇಶಕ ಚರಣ್ ತೇಜ್ ಉಪ್ಪಲಪಟ್ಟಿ ಇದೀಗ ಬಾಲಿವುಡ್ ಗೆ ಹಾರಿದ್ದಾರೆ.
ಹಿಂದಿಯಲ್ಲಿ ಅವರು ಮಹಾರಾಗ್ನಿ ಹೆಸರಿನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲೇ ಪ್ರಭುದೇವ್ ಮತ್ತು ಕಾಜೋಲ್ ಜೊತೆಯಾಗಿ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ.
ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಎರಡುವರೆ ದಶಕಗಳ ಹಿಂದೆ ತೆರೆಕಂಡ ‘ಮಿನ್ಸರ್ ಕನವು’ ಸಿನಿಮಾದಲ್ಲಿ ಈ ಜೋಡಿ ಪ್ರೇಮಿಗಳಾಗಿ ನಟಿಸಿತ್ತು. ಅದರಲ್ಲೂ ಈ ಸಿನಿಮಾದ ವೆನ್ನಿಲ್ಲವೇ ವಿನ್ನಿಲ್ಲವೇ ಸೂಪರ್ ಹಿಟ್ ಗೀತೆ.
ರೆಹಮಾನ್ ಸಂಗೀತ ಸಂಯೋಜನೆಯ ಈ ಹಾಡು ಪ್ರೇಮಿಗಳ ಮನಸ್ಸು ಕದ್ದಿತ್ತು. ಈ ಬಾರಿ ಕಾಜೋಲ್ ಮತ್ತು ಪ್ರಭುದೇವ್ ಡ್ಯುಯೆಟ್ ಹಾಡುತ್ತಿಲ್ಲ ಬದಲಿಗೆ ಥ್ರಿಲ್ಲರ್ ಸಿನಿಮಾಗಾಗಿ ಒಂದಾಗಿದ್ದಾರೆ.