ನವದೆಹಲಿ: ರಾಜತಾಂತ್ರಿಕ ನಿಪುಣ ಎಸ್. ಜೈ ಶಂಕರ್ ಅವರು ಸತತ ಎರಡನೇ ಅವದಿಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡರು.
ಪ್ರಧಾನಿ ನರೇಂದ್ರ ಮೋ ದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸರ್ಕಾ ರದ ನೂತನ ಸಚಿವರಿಗೆ ಸೋ ಮವಾರ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆ ಸಂದರ್ಭ ದಲ್ಲಿ ಮೋದಿ ಅವರು ಕಳೆದ ಸರ್ಕಾರದಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಭಾಗವಾಗಿದ್ದ ನಾಲ್ವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಅಮಿತ್ ಶಾ (ಗೃಹ), ರಾಜನಾಥ್ ಸಿಂಗ್ (ರಕ್ಷಣೆ), ನಿರ್ಮಲಾ ಸೀ ತಾರಾಮನ್ (ಹಣಕಾಸು, ಕಾರ್ಪೊ ರೇ ಟ್ ವ್ಯವಹಾರ), ಎಸ್.ಜೈ ಶಂ ಕರ್ (ವಿದೇಶಾಂಗ) ಅದೇ
ಖಾತೆಗಳಲ್ಲಿ ಮುಂದುವರಿಯಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಪ್ರಧಾನಿ ನರೇಂ ದ್ರ ಮೋ ದಿ ಅವರಿಗೆ ಧನ್ಯವಾದಗಳು ಎಂದು ಜೈ ಶಂಕರ್ ಎಕ್ಸ್ನಲ್ಲಿ ಪೋ ಸ್ಟ್
ಮಾಡಿದ್ದಾರೆ.
				
															
                    
                    
                    
                    
                    
































