ಬಿಹಾರ: 3ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷನೋರ್ವ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ತಿಲೋತು ಬ್ಲಾಕ್‌ನಲ್ಲಿರುವ ಸೊನೋರಾ ಮಿಡಲ್ ಸ್ಕೂಲ್‌ನಲ್ಲಿ.ನಡೆದಿರುವುದು ವರದಿಯಾಗಿದೆ.
ಏನಿದು ಪ್ರಕರಣ :
ದೂರಿನ ಆಧಾರದ ಮೇಲೆ ಇದೀಗ ಶಿಕ್ಷಕ ಇಶ್ತಿಯಾಕ್ ಅಹಮದ್‌ನ ಬಂಧನವಾಗಿದೆ. 3 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರೊಂದಿಗೆ ಅನುಚಿತ ವರ್ತನೆ ಮಾಡುತ್ತಿರುವುದಾಗಿ ಮಕ್ಕಳು ಪೋಷಕರ ಬಳಿ ತಿಳಿಸಿದ್ದಾರೆ. ಕೂಡಲೇ ಪೋಷಕರು ಸೋಮವಾರ (ಅ.14) ಶಾಲೆಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.
ದಸರಾ ರಜೆ ಮುಗಿದ ಬಳಿಕ ವಿದ್ಯಾರ್ಥಿನಿ ಶಾಲೆಗೆ ಹೋಗಲು ನಿರಾಕರಣೆ ಮಾಡಿದ್ದು, ಇದನ್ನು ಪ್ರಶ್ನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ದಿನನಿತ್ಯ ಈ ಶಿಕ್ಷಕ ಶಾಲಾ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ರಜೆ ಕೊಡುವಂತೆ ವಿನಂತಿ ಮಾಡಿದರೂ ರಜೆ ಕೊಡದೇ ಮೊದಲಿಗೆ ʼಐ ಲವ್ ಯುʼ ಹೇಳು ‘ಕಿಸ್ ಕೊಡು’ ‘ಅದನ್ನು ತೊರಿಸು’ ‘ಮುಟ್ಟಲು ಬಿಡು’ ಎಂದೆಲ್ಲಾ ಅಸಹ್ಯವಾಗಿ ಬಾಲಕಿಗೆ ಒತ್ತಡ ಹಾಕಿದ್ದಾನೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


































