ಬೆಳಗಾವಿ: ಒಕ್ಕಲಿಗ, ಲಿಂಗಾಯತ ಅಂತ ಹೋದ್ರೆ 30% ಇರೋ ಮುಸ್ಲಿಂರು ನಿಮ್ಮನ್ನು ಹೊಡೆದು ಹಾಕ್ತಾರೆ. ವಕ್ಫ್ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾದರೆ ಮೊದಲು ಹಿಂದುಗಳಾಗಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಒಂದುವರೆ ವರ್ಷದಿಂದ ಸರ್ಕಾರ ತಾಲಿಮಾನ ರೀತಿ ನಡೆದುಕೊಳ್ಳುತ್ತಿದೆ. ಹಿಂದೂಗಳ ಮಾರಣ ಹೋಮ ಜೊತೆಗೆ ಭೂಮಿಕ ಕಬಳಿಗೆ ಆಗುತ್ತಿದೆ. ಜಮೀರ್ ಅಹ್ಮದ್ ಖಾನ್ ನಾಲ್ಕುವರೆ ಅಡಿ ಇದ್ದಾನೆ.ಅಲ್ಲಾನ ಆಸ್ತಿ ಅಂತ ಸಚಿವ ಜಮೀರ್ ಅಹ್ಮದ್ ಖಾನ್ ಹೇಳುತ್ತಾನೆ. ಜಮೀರ್ ನಿಮ್ಮ ಅಲ್ಲಾಗೂ ನಮ್ಮ ಭಾರತಕ್ಕೂ ಏನು ಸಂಬಂಧವಿದೆ? ಅರಬ್ನಳ್ಳಿ ಹುಟ್ಟಿರುವ ಅಲ್ಲಗೆ ಭಾರತದ ಜೊತೆಗೆ ಏನು ಸಂಬಂಧ? ಜಮೀರ್ ಅಹ್ಮದ್ ನಿಮ್ಮ ಧರ್ಮಕ್ಕೂ ಭಾರತಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಭಾರತದಲ್ಲಿ ಇರುವುದು ರಾಮ, ಕೃಷ್ಣ, ಚೆನ್ನಮ್ಮನವರು ಉಳಿಸಿದ ಭೂಮಿ. ಶಿವಾಜಿ ಮಹಾರಾಜರು ಉಳಿಸಿದ ಭೂಮಿ ಇದು. ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯನವರಿಗೆ ಬುದ್ಧಿ ಕಲಿಸಬೇಕು. ವಕ್ಫ್ ಕಾಯ್ದೆ ಬರ್ಖಾಸ್ತ ಮಾಡಲು ನಾವು ಹೋರಾಟಕ್ಕೆ ಬಂದಿದ್ದೇವೆ. ಭಾರತದಲ್ಲಿರುವ ಮುಸ್ಲಿಮರ ಅಜ್ಜ ಇವರೆಲ್ಲ ಎಲ್ಲಿಂದ ಬಂದಿದ್ದಾರೆ? ಅರಬ್, ಮೆಕ್ಕಾದಲ್ಲಿ ಒಬ್ಬರು ಬಿಟ್ಟು ಹೋದ ಭೂಮಿನಾ ಇದು? ಎಲ್ಲಿಂದ ನಿಮಗೆ ಭೂಮಿ ಸಿಕ್ಕಿದೆ ನಿಮ್ಮ ಧರ್ಮಕ್ಕೆ ದಾಖಲೆ ಇಲ್ಲ ಎಂದು ಕಿಡಿ ಕಾರಿದರು.